ದೇಶದಾದ್ಯಂತ ಈರುಳ್ಳಿ ದರ ಏರಿಕೆ , ಕೇಂದ್ರದ ಬಳಿ ಇರುವ ಹೆಚ್ಚುವರಿ ದಾಸ್ತಾನಿನಿಂದ ಕೆ.ಜಿ ಈರುಳ್ಳಿಗೆ 25₹ ರಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧಾರ

0

ನವದೆಹಲಿ : • ದೇಶದಾದ್ಯಂತ ಈರುಳ್ಳಿ ದರ ಏರಿಕೆ ಕಾಣುತ್ತಿದೆ. ಜನರಿಗೆ ಹೊರೆ ಆಗುವುದನ್ನು ತಪ್ಪಿಸಲು ತನ್ನ ಬಳಿ ಇರುವ ಹೆಚ್ಚುವರಿ ದಾಸ್ತಾನಿನಿಂದ ಕೆ.ಜಿ ಈರುಳ್ಳಿಗೆ 25₹ ರಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ
• “ಯಾವ ರಾಜ್ಯಗಳಲ್ಲಿ ಈರುಳ್ಳಿ ದರ ಭಾರಿ ಏರಿಕೆ ಕಂಡಿದೆಯೋ ಅಲ್ಲೆಲ್ಲಾ ಕೇಂದ್ರದ ಬಳಿ ಇರುವ ಹೆಚ್ಚುವರಿ ದಾಸ್ತಾನನ್ನು ಮಾರಾಟ ಮಾಡಲಾಗುವುದು ” (ಎನ್‌ಸಿಸಿಎಫ್‌ &ನಾಫೆಡ್‌ ಮೂಲಕ ರಿಯಾಯಿತಿ ದರದಲ್ಲಿ ರಿಟೇಲ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ) -ಗ್ರಾಹಕರ ವ್ಯವಹಾರಗಳ ಸಚಿವಾಲಯ
• ದೇಶದಾದ್ಯಂತ ಈರುಳ್ಳಿಯ ರಿಟೇಲ್‌ ದರವು ಕೆ.ಜಿಗೆ ಸರಾಸರಿ 47₹ಕ್ಕೆ ತಲುಪಿದೆ. ಕಳೆದ ವರ್ಷ ಕೆ.ಜಿಗೆ 30₹ ಇತ್ತು. ಇದಕ್ಕೆ ಹೋಲಿಸಿದರೆ ಶೇ 57% ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ. ದೆಹಲಿಯಲ್ಲಿ ಶುಕ್ರವಾರ ಕೆ.ಜಿಗೆ 40₹ ರಂತೆ ಮಾರಾಟ ಆಗಿದೆ. ಕಳೆದ ವರ್ಷ ಕೆ.ಜಿಗೆ 30₹ ಇತ್ತು

LEAVE A REPLY

Please enter your comment!
Please enter your name here