ಪೌರ ಕಾರ್ಮಿಕರಿಂದ ಅರೆಬೆತ್ತಲೆ ಧರಣಿ : ಇಂದು ಸಂಜೆಯೊಳಗೆ ಬಾಕಿ ವೇತನ ಪಾವತಿ : ಶಾಸಕರ ಭರವಸೆ

0

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು 4ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಪ್ರತಿಭಟನಾಕಾರರು ಅರಬೆತ್ತಲೆ ಧರಣಿ ಮಾಡುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದರು.

ಪೌರ ಕಾರ್ಮಿಕರು ನಡೆಸುತ್ತಿರುವ ಸ್ಥಳಕ್ಕೆ ಇಂದು ಶಾಸಕ ಪ್ರೀತಂ ಜೆ. ಗೌಡ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ನೀವು ನಡೆಸುತ್ತಿರುವ ಪ್ರತಿಭಟನೆಯಿಂದ ಜನರಿಗೆ ಯಾವುದೇ ತೊಂದರೆಯಾಗಬಾರದು. ಬೆಳಗ್ಗೆ ತಮ್ಮ ಕರ್ತವ್ಯ ನಿರ್ವಹಿಸಿದ ಬಳಿಕ ಮತ್ತೆ ಇದೇ ಜಾಗದಲ್ಲಿ

ಪ್ರತಿಭಟನೆ ನಡೆಸಿ, ನನ್ನದೇನೂ ಅಭ್ಯಂತರವಿಲ್ಲ ಎಂದರು. ಇಂದು ಸಂಜೆಯೊಳಗೆ ನಿಮ್ಮ ಬಾಕಿ ವೇತನವನ್ನು ಪಾವತಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಸಂಜೆ ನಿಮ್ಮ ಅಕೌಂಟ್‌ಗಳಿಗೆ ಹಣ ಪಾವತಿಯಾಗಲಿದೆ ಎಂದು ಭರವಸೆ ನೀಡಿದರು.

ನಿಮ್ಮ ಬೇಡಿಕೆ ಏನಿದೆ ಆ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದೆ. ನಿಮಗೆ ನನ್ನ ಬೆಂಬಲ ಇರುತ್ತದೆ. ಆದರೆ ನೀವು ಜನರಿಗೆ ಯಾವುದೇ ತೊಂದರೆ ನೀಡದೆ ನಿಮ್ಮ ಬೆಳಗ್ಗಿನ ಕರ್ತವ್ಯ ನಿರ್ವಹಿಸಿ, ಇದೇ ಜಾಗದಲ್ಲಿ ಪ್ರತಿಭಟನೆ ನಡೆಸಿ ಎಂದು ಹೇಳಿದರು. ನಂತರ

ಪೌರಕಾರ್ಮಿಕರ ಅರೆ ಬೆತ್ತಲೆ ಪ್ರತಿಭಟನೆ
ನಾಳೆ ಸಂಜೆಯೊಳಗೆ ಸಂಬಳ ಕೊಡಿಸುವೆ ಎಂದು ಶಾಸಕ ಭರವಸೆ

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನವೂ ಮುಂದುವರಿಯಿತು.
ಸ್ವಚ್ಛತೆ ಸೇರಿದಂತೆ ಎಲ್ಲಾ ರೀತಿಯ ಕೆಲಸವನ್ನು ಬಹಿಷ್ಕರಿಸಿ ಜು.1 ರಿಂದ ಎಲ್ಲಾ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇಂದು ಡಿಸಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು, ಸೇವೆ ಕಾಯಂ ಸೇರಿದಂತೆ ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಪ್ರೀತಂಗೌಡ ಹಾಗೂ ನಗರಸಭೆ ಅಧ್ಯಕ್ಷ ಆರ್.ಮೋಹನ್ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು.
ಆದರೂ ತಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರೀತಂಗೌಡ, ನೇರ ಪಾವತಿ ಅಲ್ಲದೆ ಏಜೆನ್ಸಿ ಮೂಲಕ ಇರುವ ಪೌರಕಾರ್ಮಿಕರಿಗೂ ನೇರ ಪಾವತಿ ಆಗಬೇಕು. ನೀರು ಬಿಡುವವರು, ಚಾಲಕರು ಮತ್ತು ಯುಜಿಡಿ ಕಾರ್ಮಿಕರನ್ನೂ ಕಾಯಂ ಮಾಡಿ ಎಂದು ಸಮಿತಿಯಲ್ಲಿ ಚರ್ಚೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ನಿಗದಿತ ಸಮಯಕ್ಕೆ ಸಂಬಳ ಕೊಡುವ ಬಗ್ಗೆ ಲಿಖಿತವಾಗಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಬಳ ಗೊಂದಲವನ್ನು ನಾಳೆಯೊಳಗೆ ಬಗೆಹರಿಸಬೇಕು ಎಂದು ಸ್ಥಳದಲ್ಲಿದ್ದ ಪೌರಾಯುಕ್ತ ಪರಮೇಶ್ವರಪ್ಪ ಅವರಿಗೆ ಸೂಚನೆ ನೀಡಿದರು. ಏಜೆನ್ಸಿಯವರು ಯಾರೇ ಇದ್ದರೂ, ಅವರನ್ನು ಕಾರ್ಮಿಕರಿಗೆ ಪರಿಚಯಿಸಿ ಎಂದು ಹೇಳಿದರು.
ಗುತ್ತಿಗೆ ರದ್ದು ಪಡಿಸಿ ನೇರ ಪಾವತಿ ಮಾಡಿ ಎಂದು ಪ್ರತಿಭಟನಾಕಾರರು ಮನವಿ ಮಾಡಿದರು. ಇದಕ್ಕೆ ಸಿಎಂ ಕಚೇರಿ ಜೊತೆ ಮಾತನಾಡಿ ನಾಳೆ ಸಂಜೆಯೊಳಗೆ ನಿಮ್ಮ ಸಂಬAಳ ಹಾಕಿಸುವೆ ಎಂದು ಶಾಸಕರು ಅಭಯ ನೀಡಿದರು. ನೀವು ನಿಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೀರಿ, ತೊಂದರೆ ಕೊಟ್ಟು ಪ್ರತಿಭಟನೆ ಮಾಡೋದು ಬೇಡ ಎಂದು ಮನವಿ ಮಾಡಿದರು.

ಇದಕ್ಕು ಮುನ್ನ :
ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ

ನಗರದಲ್ಲಿ ಕುಡಿಯುವ ನೀರಿಗೆ ಪರದಾಟ, ವಿಲೇವಾರಿಯಾಗದ ಕಸ

ಹಾಸನ: ಖಾಯಂ ನೇಮ ಕಾತಿಗೆ ಆಗ್ರಹಿಸಿ ರಾಜ್ಯದ್ಯಂತ ಆರಂಭಗೊಂಡಿರುವ ಮುಷ್ಕರ ಬೆಂಬಲಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೌರಕಾರ್ಮಿಕರ ಮುಷ್ಕರ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.

ಪೌರ ಕಾರ್ಮಿಕರು ಸ್ವಚ್ಛತೆ ಹಾಗೂ ಕುಡಿಯುವ ನೀರು ಸರ ಬರಾಜು ಸ್ಥಗಿತಗೊಳಿಸಿ ಮುಷ್ಕರ ದಲ್ಲಿ ನಿರತರಾಗಿದ್ದು, ಪ್ರತಿಭಟನೆ ಪ್ರಾರಂಭವಾಗಿ ಹಲವು ದಿನ ಕಳೆದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮ ನಕ್ಕೆ ತರುತ್ತಿಲ್ಲ ಎಂದು ಆರೋ ಪಿಸಿ ನಮ್ಮ ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆಯನ್ನು ಕೈಬಿಡು ವುದಿಲ್ಲ ಎಂದು ಎಚ್ಚರಿಸಿದರು.

ಮುಷ್ಕರಕ್ಕೆ ರೇವಣ್ಣ ಬೆಂಬಲ;

ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಮಾಜಿ ಸಚಿವ ಎಚ್. ಡಿ ರೇವಣ್ಣ ಭರವಸೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ನಾಲ್ಕು ದಿನಗಳಿಂದ ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟವಧಿ ಧರಣಿ ಸ್ಥಳಕ್ಕೆ ಇಂದು ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತನಾಡಿದ ಅವರು, ಸರಕಾರ ಕೂಡಲೇ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಬೇಕು, ನೇರ ನೇಮಕಾತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಪೌರ ಕಾರ್ಮಿಕರು ಸಮಾಜದ ಮುಖ್ಯ ಭಾಗ ಸರಕಾರ ಅವರ ಬೇಡಿಕೆಗಳನ್ನು ಕೂಡಲೇ ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು, ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರ ಹಕ್ಕೊತ್ತಾಯಕ್ಕಾಗಿ ಜೊತೆಗೂಡಿ ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದರು.

ಕುಡಿಯುವ ನೀರಿಗೆ ಪರದಾಟ..!!

ಪೌರಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ನಗರದ ಬಹುತೇಕ ಬಡಾವಣೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಆಗದ ಹಿನ್ನೆಲೆ ಯಲ್ಲಿ ನಾಗರಿಕರು ಪರಿತಪಿಸು ವಂತಾಗಿದೆ. ಅಲ್ಲದೆ ಸಮರ್ಪ ಕವಾಗಿ ಕಸ ವಿಲೇವಾರಿ ಆಗದೆ ಬಡಾವಣೆಗಳಲ್ಲಿ ಕಸದ ರಾಶಿ ಬಿದ್ದಿರುವುದು ಸಾಮಾನ್ಯವಾಗಿದೆ.

ಪ್ರತಿಭಟನೆಯಲ್ಲಿ ಶಂಕರ್ ರಾಜ್, ಕೃಷ್ಣದಾಸ್ ಅರವಿಂದ್ ಸೇರಿದಂತೆ ನೂರಾರು ಪೌರ ಕಾರ್ಮಿಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here