ಗೋಮಾಳ ಉಳಿವಿಗೆ ಪ್ರತಿಭಟನೆ ತೀವ್ರ ; ಸ್ಥಳಕ್ಕೆ ಉಸ್ತುವಾರಿ ಸಚಿವರು ; ಹಾಸನದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್

0

ಕೃಷಿ ಇಲಾಖೆ ಹಾಗೂ ನಬಾರ್ಡ್ ವತಿಯಿಂದ ಹಾಸನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿಂದು  ಹಾಸನ ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಸಮಗ್ರ ಕೃಷಿ ಉತ್ತೇಜಿಸುವ ಸಲುವಾಗಿ 3.83 ಕೋಟಿ ರೂ.ವೆಚ್ಚದಲ್ಲಿ ಸೆಂಟರ್ ಫಾರ್ ಎಕ್ಸಲೆನ್ಸ್ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಸುಶ್ರೀ Shobha Karandlaje ಅವರೊಂದಿಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೇರಿ ಭೂಮಿಪೂಜೆ ನೆರವೇರಿಸಿದರು.,

ಮಾನ್ಯ ಕೃಷಿ ಸಚಿವರಾದ ಶ್ರೀ B.C.Patil, ಶಾಸಕರಾದ Preetham J Gowda ,ಹೆಚ್‌ಕೆ ಕುಮಾರಸ್ವಾಮಿ, ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ ಸಿ.ಎನ್ ಬಾಲಕೃಷ್ಣ, ಹಾಸನ ನಗರಭೆ ಅಧ್ಯಕ್ಷರಾದ ಮೋಹನ್ ಸಕಲೇಶಪುರ ಪುರಸಭೆ ಅಧ್ಯಕ್ಷರಾದ ಕಾಡಪ್ಪ, DC ಆರ್ ಗಿರೀಶ, ಜಿಲ್ಲಾ ಪಂಚಾಯತ್ CEO ಕಾಂತರಾಜ್ ಮತ್ತಿತರರು ಹಾಜರಿದ್ದರು.

ಗೋಮಾಳ ಉಳಿವಿಗೆ ಪ್ರತಿಭಟನೆ ತೀವ್ರ
ಸಂಬಂಧಪಟ್ಟವರಿಗೆ ಚರ್ಚಿಸಿ ಸೂಕ್ತ ಕ್ರಮ: ಗೋಪಾಲಯ್ಯ ಭರವಸೆ

ಹಾಸನ: ಗ್ರಾಮಕ್ಕೆ ಗೋಮಾಳ ಉಳಿಸುವಂತೆ ಒತ್ತಾಯಿಸಿ ಕಳೆದ ಕೆಲ ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ಕೌಶಿಕ ಗ್ರಾಮಸ್ಥರು ಇಂದು ಜಿಪಂ ಮತ್ತು ಡಿಸಿ ಕಚೇರಿಗೆ ಆಗಮಿಸಿ ನಮ್ಮ ಬೇಡಿಕೆ ಈಡೇರಿಸಿ ಎಂದು  ಮನವಿ ಮಾಡಿದರು.


ಗ್ರಾಮದಿಂದ ಜಾನುವಾರು ಹಾಗೂ ಎತ್ತಿನಗಾಡಿಯೊಂದಿಗೆ ನೂರಾರು ಮಂದಿ ನಗರದವರೆಗೆ ಕಾಲ್ನಡಿಗೆ ಮೆರಣಿಗೆ ನಡೆಸಿದರು.
ಆದರೆ ಜಾನುವಾರು ಹಾಗೂ ಎತ್ತಿನ ಗಾಡಿಗಳನ್ನು ಪೊಲೀಸರು ಹೊಸ ಬಸ್ ನಿಲ್ದಾಣ ಬಳಿಯೇ ತಡೆದರು.


ಅಲ್ಲಿಂದ ಆಗಮಿಸಿ ಜಿಪಂ ಎದುರು ಜಮಾಯಿಸಿದ ಗ್ರಾಮಸ್ಥರು, ಕೆಲಹೊತ್ತು ಪ್ರತಿಭಟನೆ ನಡೆಸಿದರು. ಈ ವೇಳೆ ಜಿಪಂನಲ್ಲಿ ಸಭೆ ನಡೆಸಿ ಹೊರಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದೀರಿ. ಇಂದು ಸಂಜೆಯೇ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.


20 ವರ್ಷಗಳ ಹಿಂದೆ ಕೆಐಎಡಿಬಿಗೆ ಗೋಮಾಳ ಭೂಮಿಯನ್ನು ಹಸ್ತಾಂತರ ಮಾಡಲಾಗಿದೆ. ಮತ್ತೆ ಗ್ರಾಮಕ್ಕೆ ಗೋಮಾಳ ಬಿಡುವ ಬಗ್ಗೆ ಕಾನೂನಿನ ತೊಡಕ್ಕಿದ್ದು, ಮೊದಲು ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮಾತನಾಡುವೆ. ನಿಮಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಕಾನೂನು ಎಲ್ಲರಿಗೂ ಒಂದ, ನಾನು ನಿಮ್ಮ ಜೊತೆಗಿರುವೆ ಎಂದರು. ಈ ವೇಳೆ ಎಷ್ಟು ದಿನ ಆಗುತ್ತೆ ಎಂಬ ಗ್ರಾಮಸ್ಥರೊಬ್ಬರ ಪ್ರಶ್ನೆಗೆ ಕೋಪಗೊಂಡ ಸಚಿವ, ಇಷ್ಟು ದಿನ ಏನು ಮಾಡುತ್ತಿದ್ದೆ, 20 ವರ್ಷದಿಂದ ಎಲ್ಲಿ ಹೋಗಿದ್ದೆ. ಕಾನೂನು ಬಿಟ್ಟು ನಾನು ಏನೂ ಮಾಡಲು ಆಗಲ್ಲ, ನೀವೂ ಮಾಡಲು ಆಗಲ್ಲ ಎಂದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸ್ವಾಧೀನ ಪಡೆದು 5 ವರ್ಷದವರೆಗೂ ಉದ್ದೇಶಿತ ಕಾರ್ಯಕ್ಕೆ ಬಳಸದೇ ಇದ್ದರೆ ಆ ಭೂಮಿಯನ್ನು ರೈತರಿಗೆ ಕೊಡಬೇಕು ಎಂದಿದೆ. ಇದು ಇತ್ಯರ್ಥ ಆಗೋವರೆಗೂ ಕೈಗಾರಿಕೆ ಅಧಿಕಾರಿಗಳು, ಪೊಲೀಸರು ಅಲ್ಲಿಗೆ ಹೋಗದಂತೆ, ಯಾವುದೇ ಕೇಸು ಹಾಕದಂತೆ ಸೂಚಿಸಿ ಎಂದು ಸಚಿವರಲ್ಲಿ ಮನವಿ ಮಾಡಿದರು. ಅಲ್ಲದೆ ಹಿಂದೆ ಎಕರೆಗೆ 50 ಸಾವಿರ ನೀಡಿ ಈಗ 40 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. ದನಕರುಗಳಿಗೆ ಬೇಕಾದ ಜಾಗ ಬಿಡಿಸಿಕೊಡಿ ಎಂದರು.


ಶಾಸಕ ಶಿವಲಿಂಗೇಗೌಡ ಮಾತನಾಡಿ, 100 ಜಾನುವಾರುಗಳಿಗೆ 33 ಎಕರೆ ಭೂಮಿ ಬಿಡಬೇಕು ಎಂದು ಕಾನೂನಿನಲ್ಲಿ ಇದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಸಿ.ಎನ್.ಬಾಲಕೃಷ್ಣ, ಎಂಎಲ್‌ಸಿ ಡಾ. ಸೂರಜ್ ರೇವಣ್ಣ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಕಾಂತರಾಜ್ ಮೊದಲಾದವರಿದ್ದರು. ನಂತರ ಡಿಸಿ ಕಚೇರಿಗೆ ಬಂದು ಗೋಮಾಳ ಉಳಿಸುವಂತೆ ರೈತರು, ಗ್ರಾಮಸ್ಥರು ಮನವಿ ಸಲ್ಲಿಸಿದರು.

ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಉಸ್ತುವಾರಿ ಸಚಿವ ಕೆ‌.ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಶ್ರೀ ಸೂರಜ್ ರೇವಣ್ಣ, ಶಾಸಕರಾದ ಶ್ರೀ ಶಿವಲಿಂಗೇಗೌಡ, ಶ್ರೀ ಹೆಚ್.ಡಿ.ರೇವಣ್ಣ, ಶ್ರೀ Preetham J Gowda, ಶ್ರೀ ರಾಮಸ್ವಾಮಿ, ಜಿಲ್ಲಾಧಿಕಾರಿ ಆರ್.ಗಿರೀಶ್, ಸಿಇಒ ಕಾಂತರಾಜು, ಯೋಜನಾಧಿಕಾರಿ ಪರಪ್ಪಸ್ವಾಮಿ‌ ಉಪಸ್ಥಿತರಿದ್ದರು.

ಇಂದು ಹಾಸನದಲ್ಲಿ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಸತಿ ನಿಲಯ ಕಟ್ಟಡವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಕೃಷಿ ಸಚಿವ ಬಿಸಿ.ಪಾಟೀಲ್

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರು ಹಾಗೂ ಮಾನ್ಯ ಕೇಂದ್ರ ಸರ್ಕಾರದ ಕೃಷಿ ಹಾಗೂ ಕಲ್ಯಾಣ ರೈತರ ಕಲ್ಯಾಣ ರಾಜ್ಯ ಸಚಿವೆಯಾದ ಕು. ಶೋಭಾ ಕರಂದ್ಲಾಜೆ, ಕುಲಪತಿಯವರು, ಅಧಿಕಾರಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

Held progress review meeting of Hassan district at jilla panchayat conference hall in Hassan today. MLC Shri Suraj Revanna, MLA Shri Shivalingegowda, Shri HD Revanna, Shri Preetam Gowda, Shri Ramaswamy DC and other officials were present.

Along with Union Minister of State for Agriculture SuShri Shobha Karandlaje and my colleague Shri BC Patil, performed puja for construction of Centre for Excellence building at a cost of Rs.3,83 Cr at Hassan Agricultural office premises today. The event was jointly organised by Agricultural department and NABARD. Hassan district public representatives and officials were present.

LEAVE A REPLY

Please enter your comment!
Please enter your name here