ಉದ್ಯಮಿ ರಜತ್‌ ಪಾತ್ರ ಅವರ ಮನೆ, ಹಾಸನದ ವುಡ್ ಪೆಕರ್ ಫ್ಯಾಕ್ಟರಿ ಮೇಲೆ ಐಟಿ ದಾಳಿ

0

ಉದ್ಯಮಿ ರಜತ್‌ ಪಾತ್ರ ಅವರ ಮನೆ, ಫ್ಯಾಕ್ಟರಿ ಮೇಲೆ ಐಟಿ ದಾಳಿ
ಹಾಸನ : ಉದ್ಯಮಿ ರಜತ್ ಪಾತ್ರ ಅವರ ನಿವಾಸ ಹಾಗೂ ಫ್ಯಾಕ್ಟರಿ ಮೇಲೆ ಐಟಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಹಾಸನದ ವಿದ್ಯಾನಗರದಲ್ಲಿರುವ ಮನೆ ಮತ್ತು

ಕೆಐಎಡಿಬಿ ಏರಿಯಾದಲ್ಲಿರುವ ಫ್ಯಾಕ್ಟರಿ ಮೇಲೆ ದಾಳಿ ನಡೆಸಲಾಗಿದೆ.
ರಜತ್‌ ಪಾತ್ರ ಅವರು ಹಾಸನ ಕೆಐಎಡಿಬಿ ಏರಿಯಾದಲ್ಲಿರುವ ವುಡ್ ಪೆಕರ್ ಬಿಯ‌ರ್ ಫ್ಯಾಕ್ಟರಿ ಮಾಲೀಕರಾಗಿದ್ದಾರೆ. ಇವರ ಮನೆ ಮತ್ತು

ವುಡ್ ಪೆಕರ್ ಫ್ಯಾಕ್ಟರಿ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಎರಡು ಕಡೆ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here