ಸ್ವಲ್ಪ ಗೊಂದಲ್ಲಿರುವ ಶರಣಗೌಡ ಹೊರತುಪಡಿಸಿ 18 ಶಾಸಕರು ಸಭೆಯಲ್ಲಿ ಭಾಗಿ : ಹಾಸನದಲ್ಲಿ ಹಾಸನಾಂಬೆ ಮುಂದೆ JDS ಬಲಪ್ರದರ್ಶನ

0

ಹಾಸನ : ಕಾಂಗ್ರೆಸ್‌ನ ಬಲವಂತಕ್ಕೆ ಮಣಿದು ನಮ್ಮ ಜೆಡಿಎಸ್‌ ಪಕ್ಷದ ಯಾರೂ ಪಕ್ಷ ತೊರೆಯುವವರಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆಯಿಂದ ಪಕ್ಷದ ಶಾಸಕರ ಸಭೆ ಆಗಿದೆ, ಶರಣಗೌಡ ಕಂದಕೂರು ಹೊರತುಪಡಿಸಿ ಉಳಿದ ಹದಿನೆಂಟು ಶಾಸಕರು ಭಾಗವಹಿಸಿದ್ದಾರೆ, ಒಟ್ಟಾರೆ 19 ಶಾಸಕರಲ್ಲಿ 18 ಶಾಸಕರು ಭಾಗವಹಿಸಿದ್ದಾರೆ. ಶರಣಗೌಡ ನಮ್ಮ ಮನೆ ಮಗ ಇದ್ದ ಹಾಗೆ, ಅಲ್ಪಸ್ವಲ್ಪ ಗೊಂದಲದಲ್ಲಿದ್ದಾರೆ ಅದನ್ನು ಸರಿಪಡಿಸುತ್ತೇನೆ ಎಂದರು.

ಶರಣಗೌಡರು ಪಕ್ಷ ಬಿಡುವುದಾಗಲಿ, ಆಮಿಷಗಳಿಗೆ ಒಳಗಾಗುವುದಿಲ್ಲ. ಅಭಿವೃದ್ಧಿಗೆ ಅನುದಾನ ಕೊಡದೆ ಜನತೆಗೆ ಅನಾನೂಕೂಲ ಆಗುತ್ತೆ ಎಂಬ ಭಾವನೆ ಎಲ್ಲಾ ಶಾಸಕರ ಮನದಲ್ಲಿದೆ ಎಂದು ಹೇಳಿದರು.

ಜೆಡಿಎಸ್‌ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಸುಳ್ಳನ್ನು ಪದೇ ಪದೇ ಏಕೆ ಸೃಷ್ಟಿ ಮಾಡ್ತಿದ್ದಾರೆ ಗೊತ್ತಿಲ್ಲ. ಯಾರ ಮೇಲೂ ಅನುಮಾನ ಪಡುವ ಸ್ಥಿತಿ ನಿರ್ಮಾಣವಾಗಿಲ್ಲ. ಅಪ ಪ್ರಚಾರಕ್ಕೆ ಸ್ಪಷ್ಟವಾದ, ಬಲವಾದ ಸಂದೇಶ ಕೊಡಲು ಎಲ್ಲರೂ ಒಗ್ಗೂಡಿ, ಅವರ ಸಮಸ್ಯೆಗಳನ್ನು ಚರ್ಚಿಸಲು ಸಭೆ ಮಾಡಿ ಎಂದು ಸಲಹೆ ನೀಡಿದ್ದರು. ಹಾಗಾಗಿ ರಾಜ್ಯದ ಹೊರಗೆ ಹೋಗುವುದು ಬೇಡ, ಇಲ್ಲೆ ಸಭೆ ಮಾಡೋಣ ಎಂದು ಎಲ್ಲಾ ಶಾಸಕರು ಹೇಳಿದ್ದರ ಮೇರೆಗೆ ಇಲ್ಲಿ ಸಭೆ ನಡೆಸಲಾಯಿತು ಎಂದು ಅವರು ತಿಳಿಸಿದರು.

?

ಈ ಹಿಂದೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳಾದ ಪ್ರೀಯಾಂಕ ಖರ್ಗೆ ಯಿಂದ ಹಿಡಿದು ಎಂ.ಬಿ.ಪಾಟೀಲ್

ವರೆಗೂ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ. ನಮಗೆ ಇಂಟೆಲಿಜನ್ಸ್ ಮಾಹಿತಿ ಸರ್ಕಾರಕ್ಕೆ ಬಂದಿದೆ. ಅದನ್ನು ತಡೆಯಲಿಕ್ಕೆ ಈಗಾಗಲೇ ಕಸರತ್ತು ಆರಭಿಂಸಿದ್ದಾರೆ ಎಂದು ಒಬ್ಬರೊಬ್ಬರು ಒಂದೊಂದು ಕೊಟ್ಟು ಹೇಳಿಕೆ ನೀಡುತ್ತಾ ಬಂದರು, ನಮ್ಮ ಶಾಸಕರ ಎಲ್ಲಾ ಹೆಸರುಗಳು ಪ್ರಸ್ತಾಪವಾದವು, ಸದ್ಯ ಕಾಂಗ್ರೆಸ್ ಸೇರುವುದಾಗಿ ನನ್ನ ಹೆಸರು ಮಾತ್ರ ಹೇಳಿಲ್ಲ ಎಂದು ಟೀಕಿಸಿದರು.

ನಮ್ಮ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಯಾಕೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಯಾಕೆ ಈ ಕಸರತ್ತು ಮಾಡಲಾಗುತ್ತಿದೆ. ಕೆಲಸಮಾಡುವುದು ಬಿಟ್ಟು ನೀವು ಇದನ್ನೆ ಯಾಕೆ ಮಾಡಿಕೊಂಡು ಇದ್ದೀರಾ

ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದವರು ಗಾಜಿನ ಮನೇಲಿ ಕುಳಿತಿರೋದು ಹೊರತು ನಾವಲ್ಲ, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಕೀಳಿಮಟ್ಟದ ರಾಜಕಾರಣ ಮಾಡಿಕೊಂಡು ಹೊರಟಿದ್ದೀರೆ, ಇದನ್ನು ಮೊದಲಿ ನಿಲ್ಲಿಸಿ ಎಂದು ಸಲಹೆ ನೀಡಿದರು.

ರಾಷ್ಟ್ರದ ಉನ್ನತ ಹುದ್ದೆ ಅಲಂಕರಿದ್ದವರ ಪಕ್ಷವನ್ನು ಸಣ್ಣ ಪಕ್ಷ ಎಂದು ಕರೆಯುತ್ತೀರಾ ? ಹದಿನಾಲ್ಕು ಬಾರಿ ಬಜೆಟ್ ಮಂಡಿಸಿದ್ದೀರಿ. ನಿಮ್ಮಂತಹವರು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದಿಲ್ಲ ಎಂದು ಟೀಕಿಸಿದರು.

ಬರ ಪರಿಹಾರಕ್ಕೆ ಹದಿನಾಲ್ಕು ಕೋಟಿ ಕೊಡಲು ಸಾಧ್ಯವೇ ? ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ಮಾಡಿಹೋಗಿದ್ದಾರೆ. ನಿಮ್ಮ ಕಚೇರಿಯಲ್ಲಿ ಅವರ ಜೊತೆ ಮೀಟೀಗ್ ಮಾಡಿದ್ದೀರಲ್ಲ ಏನು ಮಾಹಿತಿ ಬಹಿರಂಗಪಡಿಸಬೇಕು ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ನಾನು ಸತ್ಯ ಹೇಳುತ್ತೇನೆ ಎಂದು ಹೆಗಲ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡಲು ಸಾಧ್ಯವೇ ? ನೀವು ಸತ್ಯಹರಿಶ್ಚಂದ್ರ ಎಂದು ಹೇಳ್ಕೊಂಡು ಓಡಾಡ್ತಿರಿ, ಸಿದ್ದರಾಮ ಹುಂಡಿಯಲ್ಲಿ ಸತ್ಯ ಹರಿಶ್ಚಂದ್ರ ಹಾದು ಹೋಗಿದ್ದರೇ ? ಹಾಗಾಗಿ ನೀವು ಸತ್ಯವನ್ನೇ ಹೇಳುತ್ತೀರಾ ಎಂದು ಟೀಕಿಸಿದರು

LEAVE A REPLY

Please enter your comment!
Please enter your name here