ಹಾಸನ : ಬೂವನಹಳ್ಳಿ ವೃತ್ತದಲ್ಲಿ ಬೈಕ್ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಬೈಕ್ ಸವಾರ ಸವಾರ ಸಾವನಪ್ಪಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಅರಕಲಗೂಡು ತಾಲ್ಲೂಕಿನ ಬೋಳ ಕ್ಯಾತನಹಳ್ಳಿಯ ರಾಕೇಶ್ (23) ಎಂಬುವರೇ ಈ ಅಪಘಾತದಲ್ಲಿ ಮೃತನಾದ ದುರ್ಧೇವಿ.
ಬುಧವಾರದಂದು ಬೆಳಗ್ಗೆ ಶಾಂತಿಗ್ರಾಮ ಕಡೆಗೆ ತೆರಳುತ್ತಿದ್ದ ರಾಕೇಶ್ 23 ವರ್ಷ ಅವರು ಹಂಪ್ಸ್ ಬಳಿ ನಿಧಾನ ಮಾಡಿದಾಗ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೆ ಬೈಕ್ ಸವಾರ ಸಾವನಪ್ಪಿದ್ದಾನೆ. ಅಪಘಾತದ ನಂತರ ಪರಾರಿಯಾಗಲು ಯತ್ನಿಸಿದ ಕ್ಯಾಂಟರ್ ಚಾಲಕನನ್ನು ಮತ್ತೊಂದು ಕಾರಿನಲ್ಲಿ ಬೆನ್ನಟ್ಟಿ ಕ್ಯಾಂಟರ್ ಚಾಲಕನನ್ನು ಹೆಚ್ಕೆಎಸ್ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಡಿದ ಸ್ಥಳೀಯರು ನಂತರ ವಾಹನ ಸಮೇತ ಸಂಚಾರಿ ಪೊಲೀಸರಿಗೆ ಒಪ್ಪಿಸಿದರು. ವಿಚಾರ ತಿಳಿದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.