ಪ್ರಕೃತಿಯನ್ನು ಕಾಪಾಡುವುದು ಸಂವಿಧಾನಬದ್ಧ ಕರ್ತವ್ಯವಾಗಿದ್ದು, ಪರಿಸರವನ್ನು ಮಾಲಿನ್ಯ ಮಾಡುವುದು ಕಾನೂನು ಬದ್ಧ ಅಪರಾಧವಾಗಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪ್ರಾಂಶುಪಾಲರಾದ ಡಾ||ಹರ್ಷೇಂದ್ರ.ಕೆ ಅವರು ತಿಳಿಸಿದ್ದಾರೆ.
ಸರ್ಕಾರಿ ವಿಜ್ಞಾನ ಕಾಲೇಜು (ಸ್ವಾಯತ್ತಾ) ನ, ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ ಘಟಕದ “ಹೊಯ್ಸಳ ರೋವರ್ಸ್” ಘಟಕದ ವತಿಯಿಂದ ಆಯೋಜಿಸಿದ್ದ” ಪರಿಸರ ಉಳಿಸಿ ಜೀವ ಜಲ ಸಂರಕ್ಷಿಸಿ” ಎಂಬ ಆಂದೋಲನದ ‘ಸೈಕಲ್ ಜಾಥಾ’ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ವಿದ್ಯುತ್ತಾಗಿ ಹಸಿರು ನಿಶಾನೆ ಗೌರವ ಮೂಲಕ ಚಾಲನೆ ನೀಡಿದ ಅವರು ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮೀಸಲಾಗಬಾರದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ
ರೋವರ್ ಲೀಡರ್ ಖಲೀಲ್ ಅಹಮದ್, ಯೋಗೀಶ, ರೇಂಜರ್ ಲೀಡರ್ ಶ್ರೀದೇವಿ, ಎನ್ಎಸ್ಎಸ್ ಘಟಕದ ಯೋಜಕರು ಮೋಹನ್, ಭೌತಶಾಸ್ತ್ರ ಸಹಪ್ರಾಧ್ಯಾಪಕರು ಶಿವಕುಮಾರ್, ಪ್ರಸನ್ನ, ಪೂರ್ಣಿಮಾ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರು ರಾಮ ನಾಯಕ್, ರಾಜ್ಯ ಪುರಸ್ಕಾರ ರೋವರ್ ಹರ್ಷ.ಜೆ.ಜಿ, ಭರತ್ ರಾಜ್ ಹಾಗೂ ನಿಪುಣ್ ರೋವರ್ಸ್ ಹಾಜರಿದ್ದರು.
ಹಾಸನದಿಂದ ಸಾಲಗಾಮೆ ಮಾರ್ಗವಾಗಿ ಹೊರಟಂತ ಸೈಕಲ್ ಜಾತಾ ತಂಡ ಮಾರ್ಗ ಮಧ್ಯೆ ಸಿಗುವಂತಹ ಶಾಲಾ-ಕಾಲೇಜು, ಕಚೇರಿಗಳಿಗೆ ಭೇಟಿ ನೀಡಿ ಪರಿಸರ ಜಾಗೃತಿ ಮೂಡಿಸಿದರು. ಈ ಜಾಥಾದಲ್ಲಿ 17 ರೋವರ್ಸ್ ಗಳು ಭಾಗವಹಿಸಿದ್ದರು.