ಹಾಸನ: ಸೆಸ್ಕ್ ವ್ಯಾಪ್ತಿಯ ನಗರದ ಉಪವಿಭಾಗ ವ್ಯಾಪ್ತಿಯಲ್ಲಿ ಹುಣಸಿನಕೆರೆ ಮತ್ತು ಬೈಲಹಳ್ಳಿ ಫೀಡರ್ಗಳಲ್ಲಿ ಕಾಮಗಾರಿ ಕೆಲಸವನ್ನು ನಿರ್ವಹಿಸಬೇಕಿರುವ ಕಾರಣ ಜುಲೈ. 2ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿವಿಧ ಪ್ರದೇಶ, ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ. ಹುಣಸಿನಕರೆ ಮಾರ್ಗದ ಹುಣಸಿನಕೆರೆ ಲೇಔಟ್, ಹುಣಸಿನಕೆರೆ ಗದ್ದೆಹಳ್ಳ, ವಿಶ್ವನಾಥನಗರ, ಚಿಪ್ಪಿನಕಟ್ಟೆ ಹಾಗೂ ಬೈಲಹಳ್ಳಿ ಯರೇಹಳ್ಳಿ, ಹೂವಿನಹಳ್ಳಿ ಕಾವಲು, ಮಣಚನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯ ಮಿತವಾಗಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಇಇ ತಿಳಿಸಿದ್ದಾರೆ.