ಸಕಲೇಶಪುರ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಡಿ.ವೈ.ಎಸ್.ಪಿ ಮಿಥುನ್ ಹಾಗೂ ನಗರ ಠಾಣೆ ಪಿಎಸ್ಐ ಶಿವಶಂಕರ್ ನೇತೃತ್ವದಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಸೀಟ್ ಬೆಲ್ಟ್ ಧರಿಸದ ಕಾರು ಚಾಲಕರಿಗೆ ದಂಡ ವಿಧಿಸುವ ಬದಲು ಗುಲಾಬಿ ನೀಡಿ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂಧರ್ಭದಲ್ಲಿ
ಡಿ.ವೈ.ಎಸ್.ಪಿ ಮಿಥುನ್ ಮಾತನಾಡಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇಂದು ಗುಲಾಬಿ ನೀಡಲಾಗುತ್ತಿದ್ದು ನಾಳೆಯಿಂದ ದಂಡದ ರಸೀದಿ ನೀಡಲಾಗುತ್ತದೆ ಎಂದರು.