ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಎಎಪಿ , ಕೆ.ಆರ್.ಎಸ್. ಸೇರಿದಂತೆ ಹಾಸನ ಜಿಲ್ಲೆಯಲ್ಲಿ 8 ನಾಮಪತ್ರ ಸ್ವೀಕಾರ

0

ಜಿಲ್ಲೆಯಲ್ಲಿ 8 ನಾಮಪತ್ರ ಸ್ವೀಕಾರ
ಹಾಸನ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹಾಸನ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಒಟ್ಟು ಎಂಟು ನಾಮಪತ್ರಗಳು ಸಲ್ಲಿಕೆಯಾಗಿವೆ.
193 -ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ ಪೂರ್ವಂಚಲ್ ಮಹಾ ಪಂಚಾಯತ್ ಪಾರ್ಟಿಯಿಂದ ಹೆಚ್.ಡಿ.ರೇವಣ್ಣ ಬಿನ್ ದೊಡ್ಡೆಗೌಡ ಇವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
194 – ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಕೆ.ಆರ್.ಎಸ್. ಪಕ್ಷದಿಂದ ಉಮೇಶ್ ಬಿ.ಎಂ ಇವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
195 -ಬೇಲೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಡಿ.ಆರ್. ಮಲ್ಲಿಕಾರ್ಜುನ್ ಒಂದು ನಾಮಪತ್ರ ಸಲ್ಲಿಸಿದ್ದಾರೆ.
196 -ಹಾಸನ ವಿಧಾನಸಭಾ ಕ್ಷೇತ್ರದ ಎಎಪಿ ಪಕ್ಷದಿಂದ ಎ.ಟಿ.ಯೋಗೇಶ್ ಒಂದು ನಾಮಪತ್ರ, ಕೆ.ಆರ್.ಎಸ್ ನಿಂದ ರಮೇಶ್ ವಿ. ಒಂದು ನಾಮಪತ್ರ ಸಲ್ಲಿಸಿದ್ದಾರೆ.


198- ಅರಕಲಗೂಡು ವಿಧಾನ ಸಭಾ ಕ್ಷೇತ್ರದಿಂದ ಕೆ.ಆರ್.ಎಸ್ ಪಕ್ಷದಿಂದ ಹೆಚ್.ಟಿ.ಕೇಶವಮೂರ್ತಿ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಪುನೀತ್ ಒಂದು ನಾಮಪತ್ರ ಸಲ್ಲಿಸಿದ್ದಾರೆ.
199 ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಕೆ.ಆರ್.ಎಸ್ ಪಕ್ಷದಿಂದ ಪ್ರದೀಪ್ ಬಿ.ವಿ.ಇವರು ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್ಚನಾ ಎಂ.ಎಸ್.ತಿಳಿಸಿದ್ದಾರೆ.,

ಚುನಾವಣಾ ವೀಕ್ಷಕರ ನೇಮಕ
ಹಾಸನ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಗೆ 9 ಚುನಾವಣಾ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಈ ಪೈಕಿ 4 ಸಾಮಾನ್ಯ ಚುನಾವಣಾ ವೀಕ್ಷಕರು, 4 ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಒಬ್ಬರು ಪೊಲೀಸ್ ವೀಕ್ಷಕರನ್ನು ಚುನಾವಣಾ ಆಯೋಗ ನೇಮಕ ಮಾಡಿದ್ದು,ಈಗಾಗಲೇ ಜಿಲ್ಲೆಗೆ 4 ಚುನಾವಣಾ ವೀಕ್ಷಕರು ಆಗಮಿಸಿದ್ದಾರೆ.
ಚುನಾವಣಾ ವೀಕ್ಷಕರ ವಿವರ:
193-ಶ್ರವಣಬೆಳಗೊಳ ಹಾಗೂ 194-ಅರಸೀಕೆರೆ ವಿಧಾನಸಭಾ ಕ್ಷೇತ್ರಗಳಿಗೆ ಚಾವಿ ರಾಜನ್ ಐ.ಎ.ಎಸ್ (7760425194),
195-ಬೇಲೂರು ಮತ್ತು 196-ಹಾಸನ ವಿಧಾನಸಭಾ ಕ್ಷೇತ್ರಗಳಿಗೆ ಅಶೋಕ್ ಕುಮಾರ್ ಐ.ಎ.ಎಸ್ ( 7349350196),
197-ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಪುನೀತ್ ಗೋಯಲ್ ಐ. ಎ. ಎಸ್ (7760814197),


198-ಅರಕಲಗೂಡು ಮತ್ತು 199-ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಿಗೆ ಬಾಲಾಜಿ ದಿಗಂಬರ ಮಂಜುಳೆ, ಐಎಎಸ್ 7259983199 ಇವರನ್ನು ಚುನಾವಣಾ ವೀಕ್ಷಕರನ್ನಾಗಿ ಚುನಾವಣಾ ಆಯೋಗ ನೇಮಕ ಮಾಡಿದೆ.
ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರಾಗಿ ಬಿಮಲ್ ಗುಪ್ತಾ, ಐಪಿಎಸ್ (9418123023) ಇವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.
ಚುನಾವಣಾ ವೆಚ್ಚ ವೀಕ್ಷಕರ ವಿವರ ಇಂತಿದೆ
193-ಶ್ರವಣಬೆಳಗೊಳ ಹಾಗೂ 194-ಅರಸೀಕೆರೆ ವಿಧಾನಸಭಾ ಕ್ಷೇತ್ರಗಳಿಗೆ ಡಾ. ನಿಖಿಲ್ ಕುಮಾರ್ ಸಿಂಗ್, ಐ.ಆರ್.ಎಸ್. (7760280193)
,195-ಬೇಲೂರು ಮತ್ತು 196-ಹಾಸನ ವಿಧಾನಸಭಾ ಕ್ಷೇತ್ರಗಳಿಗೆ ಡಾ. ಕಾರ್ತಿಕೇಯನ್ ಪಾಂಡೆ, ಐ.ಆರ್.ಎಸ್. (7760488195),
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಮದನ್ ಮೋಹನ್ ಮೀನಾ, ಐ.ಆರ್.ಎಸ್.  (7349580200),
198-ಅರಕಲಗೂಡು ಮತ್ತು 199-ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಿಗೆ ಎಂ.ವಿ. ಸಿಂಗ್, ಐ.ಆರ್.ಎಸ್. 7760358198 ಇವರನ್ನು ಚುನಾವಣಾ ವೆಚ್ಚ ವೀಕ್ಷಕರಾಗಿ ಚುನಾವಣಾ ಆಯೋಗ ನೇಮಕ ಮಾಡಿದೆ.
ಸಾರ್ವಜನಿಕರು ಯಾವುದಾದರೂ ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಆಕ್ಷೇಪಗಳಿದ್ದಲ್ಲಿ ದೂರು ಸಲ್ಲಿಸಬಹುದಾಗಿದೆ.

LEAVE A REPLY

Please enter your comment!
Please enter your name here