ಕಳೆದ ರಾತ್ರಿ ( 29Aug2023 ) 9.45 ರ ಸುಮಾರು, ಹಾಸನ ಜಿಲ್ಲೆಯ ಬೇಲೂರು ರಸ್ತೆಯ ಸಂಕೇನಹಳ್ಳಿಯಲ್ಲಿ ನಡೆದ ಘಟನೆ ಇದಾಗಿದ್ದು, ಪ್ರಯಾಣಿಕರ ಹತ್ತಿಸಲು ಸಂಕೇನಹಳ್ಳಿ ಬಳಿ‌ ನಿಲ್ಲಿಸಿದ್ದ ಸಾರಿಗೆ ಬಸ್ ಒಂದಕ್ಕೆ ಹಿಂಬದಿಯಿಂದ ಬಂದ ಪ್ಲೈವುಡ್ ತುಂಬಿದ್ದ ಲಾರಿ (ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಲಾರಿ) ಬಂದು ಗುದ್ದಿದೆ

ಗುದ್ದಿದ ಪರಿಣಾಮ ಕೆಲವೇ ಕ್ಷಣದಲ್ಲಿ ಮತ್ತೊಂದು ಲಾರಿ ಆ ಪ್ಲೈವುಡ್ ತುಂಬಿದ ಲಾರಿಗೆ ಗುದ್ದಿದೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಆ ಬಸ್ ಮನೆ ಪಕ್ಕದಲ್ಲಿ ನಿಂತಿದ್ದ ಕಾರಿಗೆ ಹಾಗೂ ಕಾರಿನ ಮುಂಭಾಗದಲ್ಲಿದ್ದ ಟ್ರಾಕ್ಟರ್ ಗು ಕೂಡ ಬಡಿದಿದೆ, ಅದೃಷ್ಟ ವಶಾತ್ ಈ ಸರಣಿ ಅಪಘಾತದಲ್ಲಿ ಒಟ್ಟು 5 ವಾಹನ ಜಖಂ ಗೊಂಡಿದ್ದು ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಗೊಂಡವರ ಹಾಸನ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಿದೆ

ಯಾವುದೇ ಪ್ರಾಣಾಪಾಯ ಇಲ್ಲ, ಚಿಕ್ಕಮಗಳೂರಿನಿಂದ – ಬೆಂಗಳೂರಿಗೆ ಹೊರಟಿದ್ದ ಕಡೂರು ಡಿಪೋಗೆ ಸೇರಿದ ಎಸ್.ಆರ್.ಟಿ.ಸಿ ಬಸ್ ಇದಾಗಿದ್ದು. ಬಸ್ ಅಲ್ಪ ನುಜ್ಜು ಗುಜ್ಜಾಗಿದ್ದು. ಮನೆಯ ಮಾಲೀಕ ಚೇತನ್ ಎಸ್ ಪಿ ಆತಂಕಗೊಂಡಿದ್ದಾರೆ. ಘಟನೆಗೆ ಮತ್ತಷ್ಟು ಕಾರಣ ತಿಳಿಯಬೇಕಿದೆ .

LEAVE A REPLY

Please enter your comment!
Please enter your name here