ಹಾಸನ : ಹೇಮಾವತಿ ಜಲಾಶಯ ಯೋಜನೆಗಾಗಿ ಪರಿಹಾರವಾಗಿ ನೀಡಿದ ಜಮೀನುಗಳ ಪೋಡಿ ಮಾಡಿಕೊಡಬೇಕು ಎಂದು ಒತ್ತಾಾಯಿಸಿ ಹೇಮಾವತಿ ಜಲಶಯ ಯೋಜನೆ ಮುಳುಗಡೆ ಸಂತ್ರಸ್ತರು ಹಾಸನ ಜಿಲ್ಲಾಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಹೇಮಾವತಿ ಜಲಾಶಯ ನಿರ್ಮಾಣಕ್ಕೆೆ ನಮ್ಮನ್ನು ನಿರ್ವಸಿತರನ್ನಾಾಗಿ ಮಾಡಲಾಗಿದೆ.
ಈ ವೇಳೆ ಮನೆ ಜಮೀನು ಎಲ್ಲವನ್ನೂ ಬಿಟ್ಟು ಬೇರೆ ಕರೆ ಬದುಕು ಕಟ್ಟಿಕೊಂಡಿದ್ದೇವೆ. ಆಂದು ಪರಿಹಾರವಾಗಿ ಜಮೀನು ನೀಡಿದ್ದರೂ, ಇನ್ನೂ ಪೋಡಿ ಮಾಡಿಲ್ಲ ಎಂದು ದೂರಿದ ಸಂತ್ರಸ್ತರು, ಜಮೀನಿನ ಪೋಡಿ ಮಾಡಿಸಿಕೊಳ್ಳಲು ಇಂದು ದೊಡ್ಡ ಹೋರಾಟ ಮಾಡಬೇಕಿದೆ. ಹತ್ತಾಾರು ವರ್ಷಗಳಿಂದ ಜಮೀನು ಪೋಡಿ ಮಾಡಿಕೊಡುವಂತೆ ಒತ್ತಾಾಯ ಮಾಡುತ್ತಿದ್ದರೂ ಅಧಿಕಾರಿಗಳು ಜಮೀನು ಪೋಡಿ ಮಾಡದೇ ಸತಾಯಿಸುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದರು.
ನೀಡಿರುವ ಜಮೀನಿನಲ್ಲಿ ಇಂದು ಕೃಷಿ ಮಾಡಿಕೊಂಡಿದ್ದರೂ ಪೋಡಿ ಮಾಡದಿರುವುದರಿಂದ ಸಾಲ ಸೌಲಭ್ಯ, ಬೆಳೆ ಪರಿಹಾರ ಪಡೆಯಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅರಕಲಗೂಡು, ಆಲೂರು ,ಸಕಲೇಶಪುರ ತಾಲೂಕಿನ ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತ ಜಮೀನುದಾರರಿದ್ದರು.