ಹಾಸನ ಡಿ.22(ಹಾಸನ್_ನ್ಯೂಸ್):- ಗ್ರಾಮಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಮೊದಲ ಹಂತದ ಡಿ. 22 ಇಂದು ಚುನಾವಣೆ ನಡೆಯುವ ಹಾಸನ, ಸಕಲೇಶಪುರ, ಚನ್ನರಾಯಪಟ್ಟಣ ಮತ್ತು ಅರಕಲಗೂಡುಗಳಲ್ಲಿ ನಿನ್ನೆ ಮಸ್ಟರಿಂಗ್ ಕಾರ್ಯ ನಡೆಯಿತು.

ನಗರದ ಕಲಾ ಕಾಲೇಜಿನಲ್ಲಿ ಹಾಸನ ತಾಲ್ಲೂಕಿನ ಮಸ್ಟರಿಂಗ್ ಕಾರ್ಯ ನಡೆಯಿತು.

ಕೋವಿಡ್ ಕಿಟ್ ಮತ್ತಿತರ ಅಗತ್ಯ ಸಾಮಾಗ್ರಿಗಳು ಮತಪೆಟ್ಟಿಗೆಗಳು, ಬ್ಯಾಲೆಟ್ ಪೇಪರ್ಗಳನ್ನು ವಿತರಿಸಲಾಯಿತು.

ಚುನಾವಣಾ ಕಾರ್ಯಕ್ಕೆ ನೇಮಕಾತಿ ಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ತಮ್ಮ ತಂಡದೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ನೊಂದಿಗೆ ಪ್ರಯಾಣ ಬೆಳೆಸಿದರು.

