ಬೇಲೂರು / ಆಲೂರು : ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಭರತವಳ್ಳಿ ಕ್ರಾಸ್ ಬಳಿ ಬೈಕ್ ಹಾಗೂ ಗೂಡ್ಸ್ ಲಾರಿ ಗೆ ಮುಖಾಮುಖಿ ಡಿಕ್ಕಿಯಾಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ಸುಮಾರು 7:30 ರಿಂದ 8 ಗಂಟೆ ಸಮಯದಲ್ಲಿ ನಡೆದಿದೆ .
ಬೇಲೂರು ತಾಲ್ಲೂಕಿನ ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಬಂದಿಹಳ್ಳಿ ಗ್ರಾಮದ ಓದಪ್ಪ ಶೆಟ್ಟಿ ಎಂಬುವರ ಮಗ ರಾಕೇಶ್ ( 22 )ಎಂಬಾತನೇ ಮೃತ ದುರ್ದೈವಿ . ತನ್ನ ಸ್ವಗ್ರಾಮದಿಂದ ಹಾಸನದ NDRK ಕಾಲೇಜಿನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ, ಈತ ಬೆಳಗಿನ ಜಾವ ಕಾಲೇಜಿಗೆ KTM ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ
NH75 ರ ಭರತವಳ್ಳಿ ತಿರುವಿನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ NH 75 ಕಾಂಕ್ರೀಟ್ ರಸ್ತೆಯ ಅವೈಜ್ಞಾನಿಕತೆ ಹಾಗೂ ಮೃತ ವ್ಯಕ್ತಿಯ ಅಜಾಗರೂಕತೆ ಹಾಗೂ ಅತಿಯಾದ ವೇಗವೇ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ ಘಟನೆಯ ಸ್ಥಳದಲ್ಲಿ ರಸ್ತೆಯು ಗುಂಡಿ ಬಿದ್ದು ಅದನ್ನು ಮರು ಪ್ಯಾಚ್ ಹಾಕಿದ್ದ ಕಾಂಕ್ರೀಟ್ ಉಬ್ಬುತಬಾಗಿದ್ದು ಚಾಲಕನ ನಿಯಂತ್ರಣಕ್ಕೆ ಸಿಗದೆ ಸವಾರನು ಹಾರಿಬಿದ್ದು ಲಾರಿಯ ಚಕ್ರಕ್ಕೆ ಸಿಕ್ಕಿ ಬಿದ್ದು ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾನೆ .
ಘಟನೆ ನಡೆದ ಸ್ಥಳದಲ್ಲಿ ಅನೇಕ ಈ ರೀತಿಯ ಅಪಘಾತಗಳು ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ಹಲವಾರು ಇವೆ .ಹಾಗಾಗಿ ದ್ವಿಚಕ್ರ ವಾಹನದಲ್ಲಿ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸುವುದು ಹಾಗೂ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ವೃತ್ತ ನಿರೀಕ್ಷಕ ಹೇಮಂತ್ ಕುಮಾರ್ ಮನವಿ ಮಾಡಿದರು. ಪ್ರಕರಣವು ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.