ರಾಷ್ಟ್ರಧರ್ಮ ಸಂಘಟನೆಯಿಂದ ಬೇಲೂರು ತಾಲೂಕು ಅಡಗೂರು ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಆಂದೋಲನದಿಂದ ಪ್ರೇರಣೆಗೊಂಡು ರಾಷ್ಟ್ರಧರ್ಮ ಸಂಘಟನೆ ವತಿಯಿಂದ ಪ್ರತಿ ವಾರ ನಮ್ಮ ಬೇಲೂರು ಸ್ವಚ್ಛ ಬೇಲೂರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ
ಈ ಭಾನುವಾರ ಬೇಲೂರು ತಾಲೂಕಿನ ಅಡಗೂರು ಗ್ರಾಮದ ರಂಗನಾಥ ಸ್ವಾಮಿ ದೇವಾಲಯದ ಆವರಣವನ್ನು ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛಗೊಳಿಸಲಾಯಿತು.
ಕಿಡಿಗೇಡಿಗಳು ಮದ್ಯದ ಬಾಟಲಿಗಳನ್ನು ಎಸೆದು ದೇವಾಲಯದ ಆವರಣವನ್ನು ಹಾಳು ಮಾಡಿದ್ದು, ಆ ಮದ್ಯದ ಬಾಟಲಿಗಳನ್ನು ತೆರವುಗೊಳಿಸಲಾಯಿತು. ಸ್ವಚ್ಛತಾ ಕಾರ್ಯದ ಬಳಿಕ
ರಾಷ್ಟ್ರಧರ್ಮ ಸಂಘಟನೆ ಸಂಸ್ಥಾಪಕ ಸಂತೋಷ್ ಕೆಂಚಾಂಬ ಅವರು ಸ್ಥಳೀಯ ಕುಂದುಕೊರತೆಗಳನ್ನು ಆಲಿಸಿದರಲ್ಲದೆ, ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಿದ ಗ್ರಾಮದ ಜನತೆಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭಲ್ಲಿ ಮಂಜುನಾಥ್, ಶ್ರೀನಿವಾಸ್, ಅಭಿಲಾಶ್, ಲೋಕೇಶ್, ಪ್ರದೀಪ್, ಮತ್ತು ಗ್ರಾಮಸ್ಥರು ಇದ್ದರು