ಹಾಸನ / ಕೊಡಗು : ಕಳೆದ 13ದಿನಗಳಿಂದ ಕಾಣೆಯಾಗಿದ್ದ ಕೊಡಗು ಜಿಲ್ಲೆಯ ಕುಶಾಲನಗರದ ಸಂಚಾರಿ ಠಾಣೆಯ ಸುರೇಶ್(ASI) (52) ಅವರ ಮೃತದೇಹ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೊಳೆಯಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ಪತ್ತೆ.
ಪೊಲೀಸರು ಅವರ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದರಾದರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಮತ್ತೇನು ಎಂದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಎಎಸ್‌ಐ ಶವವಾಗಿ ಪತ್ತೆ ಅಧಿಕಾರಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು!
ಕೊಣನೂರು: ಕಳೆದ ಎರಡು ವಾರ ಗಳಿಂದ ದಿಢೀರ್ ಕಾಣೆಯಾಗಿದ್ದ ಮಡಿಕೇರಿ ಜಿಲ್ಲೆ ಕುಶಾಲನಗರ ಸಂಚಾರ ಪೊಲೀಸ್ ಠಾಣೆ ಎಎಸ್‌ಐ ಸುರೇಶ್ (52) ಶವವಾಗಿ ಪತ್ತೆಯಾ ಗಿದ್ದಾರೆ. ಕೊಣನೂರಿನ ಕಾವೇರಿ ನದಿ ದಂಡೆಯಲ್ಲಿ ಅಧಿಕಾರಿಯ ಮೃತದೇಹ ಗುರುವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುರೇಶ್ ಮೂಲತಃ ಅರಕಲಗೂಡು ತಾಲೂಕಿನವರು ಎನ್ನಲಾಗಿದ್ದು, ಕಳೆದ 2 ವರ್ಷ ಗಳಿಂದ ಕುಶಾಲನಗರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ 13 ದಿನಗಳಿಂದ ಏಕಾಏಕಿ ಕಾಣೆಯಾಗಿದ್ದರು. ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕರ್ತವ್ಯಕ್ಕೂ ಹಾಜರಾಗಿರಲಿಲ್ಲ. ಕುಶಾಲನಗರದ ಗುಮ್ಮನ ಲ್ಲಿಯಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದ ಇವರು, ಕಾಣೆಯಾದ ದಿನದಿಂದ ಮನೆಗೂ ಬೀಗ ಹಾಕಲಾಗಿತ್ತು.
ಬೆಂಗಳೂರಿನಲ್ಲಿದ್ದ ಕುಟುಂಬ: ಸುರೇಶ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎನ್ನಲಾಗಿದ್ದು, ಅವರು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದರು. ಪತ್ನಿ ಶೋಭಾ ಸಹ ಮಕ್ಕಳೊಂದಿಗೆ ಬೆಂಗಳೂರಿನಲ್ಲೇ ವಾಸವಾಗಿದ್ದರು ಎನ್ನಲಾಗಿದೆ. ಸುರೇಶ್ ಮೊಬೈಲ್ ಸ್ವಿಚ್ ಆಗುವ ಮುನ್ನ
ಮಕ್ಕಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು ಎನ್ನಲಾಗಿದೆ. ಅದಾದ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದರಿಂದ ಆತಂಕಗೊಂಡ ಮನೆಯವರು, ಗುಮ್ಮನಕೊಲ್ಲಿಯ ಪಕ್ಕದ ಮನೆಯವರು ದೂರವಾಣಿ ಕರೆ ಮಾಡಿ ವಿಚಾರಿದಾಗ ಸುರೇಶ್ ಅವರಿದ್ದ ಮನೆಗೆ ಬೀಗ ಹಾಕಿತ್ತು.
ನದಿ ದಂಡೆಯಲ್ಲಿ ಪತ್ತೆ: ನಂತರ ಪತ್ನಿ ಶೋಭಾ ನೀಡಿದ ದೂರು ಆಧರಿಸಿ ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದರು. ಅಧಿಕಾರಿ ನಾಪತ್ತೆ ನಂತರ ಮೊಬೈಲ್ ಲೊಕೇಶನ್ ಸರ್ಚಿಂಗ್‌ಗೆ ಹಾಕಿದಾಗ ಕುಶಾಲನಗರ ಹೆಬ್ಬಾಲೆ ನಡುವಿನ ಕಣಿವೆ ಬಳಿ ಲೊಕೇಶನ್ ತೋರಿಸುತ್ತಿತ್ತು ಎನ್ನಲಾಗಿದೆ.ಇದೀಗ ಸುರೇಶ್ ಅವರನ್ನೇ ಹೋಲುವ ಮೃತದೇಹ ಕಾವೇರಿ ದಂಡೆಯಲ್ಲಿ ಪತ್ತೆಯಾಗಿದೆ. ಸುರೇಶ್ ಧರಿಸಿದ್ದ ಬಟ್ಟೆ ನೋಡಿ ಇದು ಅವರದೇ ಮೃತದೇಹ ಎಂದು ಗುರುತಿಸಲಾಗಿದೆ.
↑ ಪತ್ನಿ, ಮಕ್ಕಳು – ಘಟನಾ ಸ್ಥಳಕ್ಕೆ ಆಗಮಿಸಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಹಾಸನ ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಟುಂಬ ಸದಸ್ಯರ ಹೇಳಿಕೆ ಮತ್ತು ತನಿಖೆ ನಂತರವೇ ಪೊಲೀಸ್ ಅಧಿಕಾರಿಯ ನಿಗೂಢ ಸಾವಿಗೆ ಕಾರಣ ಏನೆಂಬುದು ತಿಳಿಯಬೇಕಿದೆ.