ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ ಹೋಬಳಿ *ಕಳ್ಳೇರಿ* ಗ್ರಾಮ ಪಂಚಾಯಿತಿ ಅಗ್ಗಡಲು ಗ್ರಾಮದಲ್ಲಿ *ಕೋವಿಡ್-19* ಸಮಸ್ಯೆಯಿಂದ ಅಸಹಾಯಕರಾಗಿರುವ ಬಡವರು, ಹಾಗೂ ನಾಗರೀಕರಿಗೆ ಮಾನ್ಯ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರು ಶ್ರೀ ಬಿ ಶಿವರಾಮು ರವರು ಅಸಹಾಯಕತೆಯಲ್ಲಿರುವ ಬೇಲೂರು ಕ್ಷೇತ್ರದ ವ್ಯಾಪ್ತಿಯ ರೈತಾಪಿ ವರ್ಗ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸರಿಯಾದ ಮಾರುಕಟ್ಟೆ ದರ ಹಾಗೂ ಬೆಂಬಲಬೆಲೆ ಸಿಗದಿದ್ದನ್ನ ಮನಗಂಡು
ರೈತರು ಬೆಳೆದ ಬೆಳೆಗಳನ್ನು ಅವರ ಜಮೀನಿನಲ್ಲೇ ಅವರಿಗೆ ಸಹಾಯವಾಗಲೆಂದು ಕನಿಷ್ಠ ಬೆಲೆಗೆ ಸ್ಥಳದಲ್ಲೇ ಖರೀದಿಸಿ ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಳ್ಳೇರಿ ಗ್ರಾಮ ಪಂಚಾಯಿತಿಯ ಅಗ್ಗಡಲು, ಗೆಂಡೇಹಳ್ಳಿ, ಗ್ರಾಮಸ್ಥರಿಗೆ ಬಡವರು ಹಾಗೂ ಅಸಹಾಯಕರಾಗಿರುವವರಿಗೆ ಉಚಿತವಾಗಿ ವಿತರಿಸಿದರು.