ಬೇಲೂರು ಚೆನ್ನಕೇಶವ ರಥೋತ್ಸವ 2022 ಸುದ್ದಿ ವೈಶಿಷ್ಟ್ಯ

0

ಬೇಲೂರು / ಹಾಸನ : ಕೋವಿಡ್ ಕಾರಣದಿಂದ ಎರಡು ವರ್ಷ ಐತಿಹಾಸಿಕ ರಥೋತ್ಸವ ನಡೆದಿರಲಿಲ್ಲ. ಈ ಬಾರಿ ಹೊರ ಜಿಲ್ಲೆ, ರಾಜ್ಯಗಳಿಂದಲೂ ಬಂದಿದ್ದ ಭಕ್ತರು ಬೇಲೂರು ಶ್ರೀ ಚೆನ್ನಕೇಶವ ದಿವ್ಯ ಅದ್ದೂರಿ ರಥೋತ್ಸವ ಕಣ್ತುಂಬಿಕೊಂಡರು , ರಥೋತ್ಸವದ ಎಲ್ಲಾ ಹಿಂದಿನ ಆಚರಣೆ ಪರಂಪರೆಯ ನೆನಪಿಸಿಕೊಳ್ಳಲು ಎರಡು ಕಣ್ಣು ಸಾಲದು ಎಂಬಂತಿತ್ತು .

ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಬುಗಿಲೆದ್ದ ವಿವಾದಕ್ಕೆ ತಲೆಕೆಡಿಸಿಕೊಳ್ಳದೆ , ನಮ್ಮ ಊರ ಹಬ್ಬ ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗು ಅವಕಾಶ ನೀಡಿ ಜಿಲ್ಲಾಡಳಿತ ಸರ್ವಧರ್ಮ ಸಹಬಾಳ್ವೆ ಎತ್ತಿಹಿಡಿದು ಸಾವಿಂಧಾನಿಕ ಹಿರಿಮೆ ಮೆರೆದು ಸೂಚನೆ ಮೇರೆಗೆ ಎಲ್ಲ ಧರ್ಮದವರಿಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯರ ಪ್ರಕಾರ ಹಿಂದು ಮುಸ್ಲಿಂ ಬೇಲೂರಿನಲ್ಲಿ ಒಗ್ಗಟ್ಟಿನಿಂದಿದೆ ಹೀಗೆ ಇರಲಿದೆ ಎಂದರು .

ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವಕ್ಕೂ ಮುನ್ನ, ಸಂಪ್ರದಾಯ ದಂತೆ ದೊಡ್ಡಮೇದೂರಿನ ಮೌಲ್ವಿ ಸೈಯದ್ ಸಜ್ಜಾದ್ ಬಾಷಾ ಅವರು ಬುಧವಾರ ಕುರಾನ್‌ ಪಠಣ ಮಾಡಿ ನಂತರ ರಥವನ್ನು ಮೂಲಸ್ಥಾನ ದಿಂದ ಎಳೆದು ಗೋಪುರದ ಆಗ್ನೇಯ ದಿಕ್ಕಿನಲ್ಲಿರುವ ಬಯಲು ರಂಗಮಂದಿರದ ಬಳಿಗೆ ತಂದು ನಿಲ್ಲಿಸಲಾಯಿತು

ಪಠಣದ ಬಳಿಕ ಮಾತನಾಡಿದ ಮೌಲ್ವಿ : ” ಎಲ್ಲರಿಗೂ ಒಳಿತಾಗಲಿ, ಎಲ್ಲಡೆ ಸಾಮರಸ್ಯ ಮೂಡಲಿ. ವಿಶ್ವದಲ್ಲಿ ಶಾಂತಿ ನೆಲೆಸಲಿ. ಎಲ್ಲೆಡೆ ಉತ್ತಮ ಮಳೆ, ಬೆಳೆಯಾಗಲಿ , ವಂಶ ಪಾರಂಪರ್ಯವಾಗಿ ರಥೋತ್ಸವ ವೇಳೆ ಕುರಾನ್ ಪಠಣ ಮಾಡಿಕೊಂಡು ಬಂದಿದ್ದೇವೆ. ನನ್ನ ನಂತರ ನನ್ನ ಮಕ್ಕಳು ಇದನ್ನು ಮುಂದುವರೆಸಿಕೊಂಡು ಹೋಗಲಿ., ದೇವಸ್ಥಾನದಿಂದ ಪ್ರತಿ ವರ್ಷ ನನಗೆ ಅಕ್ಕಿ, ದವಸ ಧಾನ್ಯಗಳನ್ನು ನೀಡಲಾಗುತ್ತಿದೆ ” ನಾನು ಸದಾ ಈ ದೇವಸ್ಥಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಅಭಿಮಾನಿಗಳು ಪುನೀತ್‌ ರಾಜ್‌ಕುಮಾರ್ ಭಾವಚಿತ್ರ ಹಿಡಿದು ಸಾಗಿದ್ದು ವಿಶೇಷವಾಗಿತ್ತು.,ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು, ವನವನ್ನು ಎಸೆದು ಭಕ್ತಿ ಸರ್ಮಪಿಸಿದರು. ದೇವಸ್ಥಾನ ಆಡಳಿತ ಮಂಡಳಿ, ಸಂಘ ಸಂಸ್ಥೆ ಹಾಗೂ ಸಾಮಾಜಿಕ ಕಾರ್ಯಕರ್ತರು ಮಜ್ಜಿಗೆ, ಪಾನಕ, ಉಪಾಹಾರ ವ್ಯವಸ್ಥೆ ಮಾಡಿದ್ದರು.

ರಥೋತ್ಸವದಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ಹೊಳೇನರಸೀಪುರದ ಶಾಸಕ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾರಾಜರಾಮ್, ದೇಗುಲದ ಕಾರ್ಯ ನಿರ್ವಹಣಾಧಿಕಾರಿ ವಿದ್ಯುಲ್ಲತಾ, ಡಿವೈಎಸ್‌ಪಿ ಅಶೋಕ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಪುರಸಭಾ ಸದಸ್ಯರಾದ ರತ್ನಮ್ಮ, ಶೈಲೇಶ್, ಮುಖಂಡರಾದ ವಿಜಯಲಕ್ಷ್ಮಿ, ತೀರ್ಥಂಕರ್ , ಬಿಜೆಪಿ ಟಿಕೆಟ್ ಆಕಾಂಕ್ಷಿ ಹುಲ್ಲಳ್ಳಿ ಸುರೇಶ್ , ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಿವರಾಂ ಇತರರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here