ಸೋಮವಾರ (28ಮಾರ್ಚ್ 2022) ಬೆಳಿಗ್ಗೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಇ.ಹೊಸ ಹಳ್ಳಿಯ ವೆಂಕಟೇಶ್ ಎಂಬುವರ ಮನೆಯಲ್ಲಿ ವೆಂಕಟೇಶ್ ತಾಯಿ ನೀಲಮ್ಮ ಬೆಳಿಗಿನ ತಿಂಡಿ ತಯಾರಿಸುತಿದ್ದಾಗ ಸಿಲಿಂಡರ್ನಿಂದ ಗ್ಯಾಸ್ ಸೋರಿಕೆಯಾಗಿ ಧಗ್ಗನೆ ಬೆಂಕಿ ಹೊತ್ತಿಕೊಂಡಿದ್ದು. ಇದ ಗಮನಿಸಿದ ನೀಲಮ್ಮ, ಸೊಸೆ ರೇಖಾ ಹಾಗೂ ಇಬ್ಬರು ಮೊಮ್ಮಕ್ಕಳ ಹೊರಗೆ ಕರೆ ತಂದಿದ್ದಾರೆ. ಆರಂಭದಲ್ಲಿ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಪಟ್ಟರು.
ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿ. ಅದಾಗಲೇ ಮನೆಯ ಸ್ವಲ್ಪ ಭಾಗ, ಮನೆಯಲ್ಲಿದ್ದ ಬಟ್ಟೆ, ಹಾಸಿಗೆ–ಹೊದಿಕೆ, ಕುರ್ಚಿ, ಪೀಠೋಪಕರಣ, ಹಣ, ಒಡವೆ, ದವಸ–ಧಾನ್ಯ, ಜಮೀನಿಗೆ ನೀರು ಹಾಯಿಸಲು ತಂದಿದ್ದ ಪೈಪುಗಳು, ವಿದ್ಯುತ್ ಸ್ವಿಚ್ಗಳು ಸೇರಿದಂತೆ ಸಾಕಷ್ಟು ವಸ್ತುಗಳು ಸುಟ್ಟು ಹೋಗಿ ನಷ್ಟವಾಗಿದೆ .,
ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ತಕ್ಷಣ ಮನೆಯಿಂದ ಎಲ್ಲರೂ ಹೊರ ಬಂದಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ. ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಹೋಗಿವೆ. ಪರಿಹಾರ ನೀಡಬೇಕು ಅಂದಾಜು 12 ಲಕ್ಷ ನಷ್ಟವಾಗಿದೆ ಯಾರು ಕೊಡೋರು ಎಂದು ಮನೆಯ ಮಾಲಿಕ ವೆಂಕಟೇಶ್ ಒತ್ತಾಯಿಸಿದರು
HP ಗ್ಯಾಸ್ ಕಂಪೆನಿಯ ಪ್ರತಿನಿಧಿಗಳು, ಗ್ರಾಮಲೆಕ್ಕಾಧಿಕಾರಿ ವಿದ್ಯಾ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆದಿದೆ.