ಬೇಲೂರು: ತಾಲ್ಲೂಕಿನ ಉತ್ಪಾತನಹಳ್ಳಿ ಯಲ್ಲಿ ಮನೆಯೊಂದರ ಗೃಹಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರತನಾಗಿದ್ದ ಕಾರ್ಮಿಕ ಸುರೇಂದ್ರ (ಉರುಫ್) ಸುನಿಲ್ (28 ವರ್ಷ) ನ.1 ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಹೈಟೆನ್ಷನ್ ವಿದ್ಯುತ್ ಶಾಕ್ ನಿಂದ ಮೃತ ಪಟ್ಟ ಘಟನೆ ನಡೆದಿದೆ.,
ಮೂಲತಃ ಕೋಗೋಡಿನವರಾದ ಸುನಿಲ್ ಧ್ವನಿ ವರ್ಧಕ ಇನ್ನಿತರ ಕೆಲಸ ನಿರ್ವಹಿಸುತ್ತಿದ್ದವರು. ಅವಿವಾಹಿತರಾದ ಮೃತರು ಜನಾನುರಾಗಿಯಾಗಿದ್ದರು. ತಮ್ಮ ಕೆಲಸದ ಮೂಲಕ ಜನ ಸಾಮಾನ್ಯರ ವಿಶ್ವಾಸ ಗಳಿಸಿದ್ದರು. ತಾಲ್ಲೂಕು ಧ್ವನಿ ಮತ್ತು ಬೆಳಕು ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ತಂದೆ, ತಾಯಿ, ಸಹೋದರ, ಸಹೋದರಿ, ಸೇ ರಿದಂತೆ ಅಪಾರ ಬಂಧು ಬಳಗ, ಸ್ನೇಹ ಬಳಗವನ್ನು ಹೊಂದಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಮೃತರ ಸ್ವಂತ ಗ್ರಾಮವಾದ ಕೋಗೋಡಿನಲ್ಲಿ ನೆರವೇರಲಿದೆ.