ಸಿಟಿಸ್ಕ್ಯಾನ್ ಯಂತ್ರ ಹಸ್ತಾಂತರ ಉದ್ಘಾಟನಾ ಕಾರ್ಯಕ್ರಮ ಇಂದು
ಚನ್ನರಾಯಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಡಿ ಪಟ್ಟಣದ ನಾಗೇಶ್ ಆಸ್ಪತ್ರೆಯ ಸಹಯೋಗದಲ್ಲಿ ಸಿಟಿಸ್ಕ್ಯಾನ್ ಯಂತ್ರ ಹಸ್ತಾಂತರ ಮತ್ತು ಉದ್ಘಾಟನಾ ಕಾರ್ಯಕ್ರಮ ಜು. 5 ಇಂದು ಮಂಗಳವಾರ ಜರುಗಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರಹೆಗ್ಗಡೆ ಯಂತ್ರದ ಹಸ್ತಾಂತರ ಮಾಡಿದರು, ಹೈಟೆಕ್ ಸಿಟಿಸ್ಕ್ಯಾನ್ ಸೆಂಟರ್‌ನ ಆವರಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ . ನಾಗೇಶ್ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ನಾಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಶಾಸಕ ಸಿ.ಎನ್.ಬಾಲಕೃಷ್ಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರನಿರ್ವಹಣಾಧಿಕಾರಿ ಡಾ. ಎಚ್.ಮಂಜುನಾಥ್, ತಹಸೀಲ್ದಾರ್ ಬಿ. ಎಂ.ಗೋವಿಂದರಾಜ್, ಪುರಸಭಾಧ್ಯಕ್ಷ ಜಿ.ಆರ್.ಸುರೇಶ್, ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.