ಬೇಲೂರು ತಾಲ್ಲೂಕಿನ ಅರೇಹಳ್ಳಿ ಹಾಗೂ ಬಿಕ್ಕೋಡು ಭಾಗಗಳಲ್ಲಿ ಇತ್ತೀಚಿಗೆ ಬಿದ್ದ ಭಾರೀ ಮಳೆಯಿಂದಾಗಿ ಕಾಫಿ ಬೆಳೆ ಹಾನಿಯಾಗಿರುವ ಭಾಗಗಳಿಗೆ ಭೇಟಿ ನೀಡಿ ಬೆಳೆಗಾರರ ಹಾಗೂ ಕೂಲಿ ಕಾರ್ಮಿಕರ ಸಂಕಷ್ಟದ ಕುರಿತು ಮಾಹಿತಿ ಪಡೆದ ಸಂಸದ ಪ್ರಜ್ವಲ್ ರೇವಣ್ಣ
ಹಾಸನ ಜಿಲ್ಲೆಯಲ್ಲಿ ಮಳೆಯಿಂದಾಗಿ ಕೈಗೆ ಬಂದಂತ ಫಸಲು ಗಿಡದಲ್ಲೇ ಕೊಳೆಯುವಂತಹ ಪರಿಸ್ಥಿತಿ ಉಂಟಾಗಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಸಕಲೇಶಪುರ , ಬೇಲೂರು ಈ ಭಾಗವನ್ನು ರಾಷ್ಟ್ರೀಯ ವಿಪತ್ತು ಪರಿಹಾರಕ್ಕೆ ಸೇರಿಸದಿರುವುದು ದುರಾದೃಷ್ಟಕರ, ಸರ್ಕಾರ ಹಾಗೂ ಕಂದಾಯ ಇಲಾಖೆ ಸರಿಯಾಗಿ ಯಾವುದೇ ವೈಜ್ಞಾನಿಕವಾಗಿ ವರದಿಯನ್ನು ನೀಡುತ್ತಿಲ್ಲ. ಆದ್ದರಿಂದ ಕಾಫಿ ಬೊರ್ಡ್ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಎಸಿ ಹಾಗೂ ತಹಶೀಲ್ದಾರ್ ಅವರಿಗೆ ಇನ್ನೆರಡು ದಿನಗಳಲ್ಲಿ ಸಭೆ ಕರೆದು ಇದರ ಬಗ್ಗೆ ಗಮನ ಹರಿಸಲು ಸೂಚಿಸುತ್ತೇನೆ. ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕೇವಲ ಕಾಫಿ ಬೆಳೆಗಾರರು ಮಾತ್ರವಲ್ಲದೆ, ಕೂಲಿ ಕಾರ್ಮಿಕರು ಸಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾರ್ಮಿಕ ಇಲಾಖೆಯ ಸಹಾಯ ಪಡೆದು ನೊಂದಾಯಿತ ಕೂಲಿಕಾರ್ಮಿಕರಿಗೆ ಸರ್ಕಾರದಿಂದ ಯಾವುದಾದರು ರೀತಿಯಲ್ಲಿ ಅನುಕೂಲ ಮಾಡಿಸುವುದಾಗಿ ತಿಳಿಸಿದ್ದೇನೆ. ಎಂದು ಈ ಸಂದರ್ಭದಲ್ಲಿ ಮಾಧ್ಯಮ ಕ್ಕೆ ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಇತರೆ ಅಧಿಕಾರಿಗಳಿದ್ದರು @iprajwalrevanna
#hassanmp #belur #sakleshpur #coffee #coffeeplanters