ಟೊಮೆಟೊ ಯಾಕೆ ಅಷ್ಟು ಉಪಯೋಗಕಾರಿ? ಈ ತರಕಾರಿ ನಮಗೆ ಏಕೆ ಸಹಾಯಕಾರಿ?

0

ಟೊಮೆಟೊ ನಮ್ಮ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಹಸಿಯಾಗಿ ಅಥವಾ ಸಲಾಡ್ ರೂಪದಲ್ಲಿ ಸೇವಿಸಬಹುದು. ಟೊಮೆಟೊ ಜ್ಯೂಸ್ ಸೇವನೆಯಿಂದ ಸಮತೋಲನದ ಆಹಾರ ಲಭ್ಯವಾಗುತ್ತದೆ .

ಟೊಮೆಟೊದಲ್ಲಿ ವಿಟಮಿನ್ ಸಿ,ಕೆ, ಪೊಟ್ಯಾಸಿಯಂ ಹೆಚ್ಚು ಪ್ರಮಾಣದಲ್ಲಿ ಇದೆ. ಇದರಲ್ಲಿ ಇರುವ ಲೈಕೋಪಿನ್ ಅಂಶ ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ .ಇಂತಹ ಕೋವಿಲ್ ಸಮಯದಲ್ಲಿ ದಿನಕ್ಕೆ ಒಂದು ಬಾರಿ ಟೊಮ್ಯಾಟೊ ಜ್ಯೂಸ್ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಪ್ರಯೋಜನಗಳು

*ನಮ್ಮ ಮೂಳೆಗಳನ್ನು ಬಲವಾಗಿ ಮಾಡುತ್ತದೆ
ಮೂಳೆಗಳಿಗೆ ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಕೆ ಬಹಳ ಸಹಾಯಕಾರಿ ಈ ಅಂಶವನ್ನು ಟೊಮೆಟೊ ನೀಡುತ್ತದೆ . ನಮ್ಮ ಮೂಳೆಗೆ ಇದು ಬಹಳ ಉಪಯೋಗಕಾರಿ.

*ಮೃದುವಾದ ತ್ವಚೆ ನಿಮ್ಮದಾಗುತ್ತದೆ
ನಿತ್ಯವೂ ಟೊಮೆಟೊ ರಸ ಕುಡಿದರೆ ಅದು ಮೃದುವಾದ ,ಒಳ್ಳೆಯ ತ್ವಚೆ ಲಭಿಸುತ್ತದೆ ಟೊಮೆಟೊ ರಸವನ್ನು ಕುಡಿಯುವ ಮೂಲಕ ತ್ವಚೆಯ ಅಡಿಯಲ್ಲಿ ಉತ್ತಮ ಪೋಷಣೆ ನೀಡುತ್ತದೆ.

*ರಕ್ತ ಹೆಪ್ಪುಗಟ್ಟೆಯನ್ನು ತಡೆಯುವುದರಲ್ಲಿ ಟೊಮೆಟೊ ಮುಖ್ಯಪಾತ್ರಧಾರಿ
ಹೃದಯಕ್ಕೆ ಸಂಬಂಧಿಸಿದಂತೆ ತೊಂದರೆಯಿರುವವರು ಟೊಮ್ಯಾಟೋಯಿಂದ ಬಹಳಷ್ಟು ಲಾಭಗಳು ಪಡೆಯಬಹುದು ಇದರಲ್ಲಿರುವ ಫೈಟೋ ನ್ಯೂಟ್ರಿಯೆಂಟ್ ಅನಗತ್ಯವಾಗಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

ಟೊಮೆಟೊವನ್ನು ಅರ್ಧದಷ್ಟು ಕತ್ತರಿಸಿ ದಿನಕ್ಕೆ ಒಂದು ಬಾರಿ ನಿಮ್ಮ ಮುಖದ ಮೇಲೆ ಉಜ್ಜಿಕೊಳ್ಳಿ ಇದು ನಿಮ್ಮ ಮುಖದ ಮೇಲಿರುವ ರಂಧ್ರಗಳನ್ನು ಮರೆಹಾಕುತ್ತದೆ. ಇದು ನಿಮ್ಮ ಮುಖದ ಮೇಲಿರುವ ಗುರುತುಗಳನ್ನು ಕೂಡ ಅಳಿಸುತ್ತದೆ ನಿಮಗೆ ಹೊಳೆಯುವ ಚರ್ಮ ನೀಡುತ್ತದೆ .

LEAVE A REPLY

Please enter your comment!
Please enter your name here