ಹಾಸನ ಜಿಲ್ಲೆಯ ಒಟ್ಟು HIV , ಕ್ಷಯರೋಗಿಗಳು ಹಾಗೂ ಅವರಿಗೆ ಹಿಮ್ಸ್ ವತಿಯಿಂದ ಚಿಕಿತ್ಸೆಯ ವಿವರ

0

ಹಾಸನ : ಜಿಲ್ಲೆಯಲ್ಲಿ ಈವರೆಗೆ 11,213 HIV ಸೋಂಕಿತರು  , ಪ್ರಸ್ತುತ 7014 ಮಂದಿ ಸೋಂಕಿತರಿದ್ದಾರೆ. ಇದರಲ್ಲಿ 229 ಮಕ್ಕಳು , ಈ ವರ್ಷ 290 ಸಾಮಾನ್ಯ ಹಾಗೂ 18 ಗರ್ಭಿಣಿಯರಿಗೆ ಸೋಂಕು ತಗುಲಿರುವುದನ್ನು ಪತ್ತೆ ಮಾಡಿ ಹಿಮ್ಸ್‌ ಹಾಗೂ ಹಲವು ಸ್ವಯಂ ಸಂಸ್ಥೆಗಳ ಸಹಯೋಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಹಾಸನ ಜಿಲ್ಲೆಯಲ್ಲಿ 1,200 ಜನ ಕ್ಷಯ ರೋಗಿಗಳಿದ್ದು, ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ತಪಾಸಣೆ ಕೈಗೊಳ್ಳಲು ಜಿಲ್ಲಾಡಳಿತ ವತಿಯಿಂದ ಕ್ರಮವಹಿಸಲಾಗಿದೆ

ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾಮೀಣ  ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಸೋಂಕಿನ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

” ಎಚ್‌ಐವಿ/ಕ್ಷಯ ಸೋಂಕಿತರಿಗೆ ಚಿಕಿತ್ಸೆ ನೀಡುವ ಜೊತೆಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ” – ಸತೀಶ್ (ಹಾಸನ ಜಿಲ್ಲಾ ಆರೋಗ್ಯ ಅಧಿಕಾರಿ)

HIV ಸೋಂಕಿತರಿಗೆ, ಲೈಂಗಿಕ ಕಾರ್ಯಕರ್ತರಿಗೆ, ಲಿಂಗ ಅಲ್ಪಸಂಖ್ಯಾ ತರಿಗೆ ಸಂಬಂಧಿಸಿದಂತೆ ನಿವೇಶನ, ಮಾಶಾಸನ, ಪ್ರೋತ್ಸಾಹ ಧನ, ಪಡಿತರ ಚೀಟಿ ವಿತರಣೆ, ಇ-ಶ್ರಮ್ ಯೋಜನೆ ಕುರಿತು ಹಲವಾರು ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್ ಆದೇಶ

ಹಾಸನ್ ನ್ಯೂಸ್ ಕಳಕಳಿ : ದಯವಿಟ್ಟು ಯಾವುದೇ ಈ ಸೋಂಕಿತರ ಅನ್ಯತಾ ಭಾವಿಸದೆ ಅವರ ಚಿಕಿತ್ಸೆ ಹಾಗೂ ಅವರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿ ಶೇಕಡಾ 100% ಕ್ಷಯರೋಗ ಗುಣ ಪಡುತ್ತದೆ ಸಮಯಕ್ಕೆ ತಕ್ಕ ಚಿಕಿತ್ಸೆ ಪಡೆದು ಆರೋಗ್ಯವಾಗಿರಿ  , ಧನ್ಯವಾದಗಳು

LEAVE A REPLY

Please enter your comment!
Please enter your name here