ಪಂಜಾಬ್‍ನಿಂದ ನೇರವಾಗಿ ಬಿತ್ತನೆ ಬೀಜ ಆಗಮಿಸುತ್ತಿದ್ದು : ಕ್ವಿಂಟಲ್‍ಗೆ ಗರಿಷ್ಠ 2,800₹ ದರ ಮೇ 9ರ ನಂತರ ಮಾರಾಟ

0

ಹಾಸನ / ಪಂಜಾಬ್ : ಮುಂಗಾರು ಹಂಗಾಮಿಗೆ ಆಲೂಗಡ್ಡೆ ಬೆಳೆ ಬೇಸಾಯ ಹಾಗೂ ಬಿತ್ತನೆ ಬೀಜ ಮಾರಾಟ ಕುರಿತು ಹಾಸನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಚರ್ಚೆ  ಸಭೆಯಲ್ಲಿ ಬಿತ್ತನೆಗಾಗಿ ಆಲೂಗಡ್ಡೆ ಸರಬರಾಜು, ಮಾರಾಟ ಪ್ರಾರಂಭ, ಧಾರಣೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ : ಪ್ರಸಕ್ತ ಪಂಜಾಬ್ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಮಾರಾಟ ದರ ಪ್ರತಿ ಕ್ವಿಂಟಲ್‍ಗೆ 1,800 ರಿಂದ  2,000₹ ಇದೆ.  ಇದರೊಂದಿಗೆ ಪಂಜಾಬ್‌ನಿಂದ ಸಾಗಾಣಿಕೆ(loading) , – ಅನ್‍ಲೋಡಿಂಗ್(unloading) ವೆಚ್ಚ ಇತ್ಯಾದಿ ದರ ಸೇರಿಸಿದರೆ ಜಿಲ್ಲೆಯಲ್ಲಿ ಬಿತ್ತನೆ ಆಲೂ ಕ್ವಿಂಟಲ್‍ಗೆ 2,800 ರಿಂದ 3000₹ ಆಗುತ್ತದೆ

ಅಂತಿಮವಾಗಿ  ಬಿತ್ತನೆ ಆಲೂಗಡ್ಡೆಯನ್ನು ಕ್ವಿಂಟಲ್‌ಗೆ ₹ 2,700 ರಿಂದ 2,800 ದರದಲ್ಲಿ ಮಾರಾಟ ಮಾಡಲು ತೀರ್ಮಾನಿಸಲಾಯಿತು…

ಮೇ 9 ರ ನಂತರ ಬಿತ್ತನೆ ಬೀಜ ಮಾರಾಟ ಮಾಡಬಹುದು. ಒಂದು ವಾರದ ಬಿಜೋಪಚಾರ ನಂತರ ಮೇ 20 ರಿಂದ ಬಿತ್ತನೆ ಪ್ರಾರಂಭ ಮಾಡುವಂತೆ ರೈತರಿಗೆ ಸೂಕ್ತ ಅರಿವು ಮೂಡಿಸುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಈ ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿಶಿವಶಂಕರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣೇಗೌಡ, ಎಪಿಎಂಸಿ ಆಲೂಗಡ್ಡೆ ವರ್ತಕರ ಸಂಘದ ಉಪಾಧ್ಯಕ್ಷ ಎಂ.ಎಸ್.ರಂಗೇಗೌಡ, ನಿರ್ದೇಶಕರಾದ ದೇವರಾಜ್, ಸಿ.ಎಚ್. ಬಿ. ಕಾರ್ಯದರ್ಶಿ ಮಧು ಹಾಜರಿದ್ದರು.

LEAVE A REPLY

Please enter your comment!
Please enter your name here