ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಅವಧಿಯ ಎರಡು ವರ್ಷಗಳ ಅವಧಿ ಬಹಳ ಪ್ರಮುಖ ಘಟ್ಟ

0

ಎ.ಪಿ.ಜೆ ಅಕಾಡೆಮಿ ಹಾಸನ
20:3:2022 :

“ತ್ಯಾಗ ಮತ್ತು ಪರಿಶ್ರಮದ ವಿದ್ಯಾರ್ಥಿಜೀವನ ಸಮೃದ್ಧಿ ಮತ್ತು ಸುಖದ ಭವಿಷ್ಯಕ್ಕೆ ಬುನಾದಿ”- ಶ್ರೀ ಪ್ರೀತಂ ಜೆ ಗೌಡ
ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಅವಧಿಯ ಎರಡು ವರ್ಷಗಳ ಅವಧಿ ಬಹಳ ಪ್ರಮುಖ ಘಟ್ಟ ಈ ಸಮಯದಲ್ಲಿ ತ್ಯಾಗ ಮತ್ತು ಪರಿಶ್ರಮದ ಜೀವನ ಅಳವಡಿಸಿಕೊಂಡರೆ

ಅವರ ಭವಿಷ್ಯದ ಐದು ದಶಕಗಳ ಸುದೀರ್ಘ ಅವಧಿಯ ಜೀವನವು ಸಮೃದ್ಧಿ ಮತ್ತು ಸುಖದಿಂದ ಇರುವುದರಲ್ಲಿ ಸಂಶಯವಿಲ್ಲ ಎಂದು ಹಾಸನ ವಿಧಾನಸಭೆ ಸದಸ್ಯ ಶ್ರೀ ಪ್ರೀತಮ್ ಗೌಡ ಅವರು ಅಭಿಪ್ರಾಯಪಟ್ಟರು ಅವರು ನಗರದ ಕೆಆರ್ ಪುರಂನಲ್ಲಿ ಇರುವ ಎಪಿಜೆ ಅಕಾಡೆಮಿಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲೆಯ ಉಪನಿರ್ದೇಶಕರು ಶ್ರೀ ಸಿಎಂ ಮಹಾಲಿಂಗಯ್ಯ ಅವರು ಮಾತನಾಡಿ

ಪಿಯುಸಿ ವಿಜ್ಞಾನ ಕೋರ್ಸಿನಲ್ಲಿ ಸ್ಪರ್ಧೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಸರಕಾರಿ ಕಾಲೇಜುಗಳಲ್ಲಿಯೂ ಸಿಇಟಿ ನಿಟ್ ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕಾರ್ಯ ಆರಂಭವಾಗಿದೆ ನಮ್ಮ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಅನ್ಯ ಜಿಲ್ಲೆಗಳಿಗೆ ಹೋಗಿ ಯಶಸ್ವಿಯಾದರೆ ಪ್ರಯೋಜನವಿಲ್ಲ ಈ ಪ್ರತಿಭಾ ಪಲಾಯನ ತಡೆದು ಪಾಲಕರಿಗೆ ಆಗುತ್ತಿರುವ ಆರ್ಥಿಕ ಮತ್ತು ಮಾನಸಿಕ ಒತ್ತಡ ತಡೆಗಟ್ಟುವಲ್ಲಿ ಹಾಸನದ ಎಪಿಜೆ ಅಕಾಡೆಮಿ ಅರ್ಥಪೂರ್ಣ ಕೆಲಸ ಮಾಡುತ್ತಿದ್ದು ಇಲ್ಲಿನ ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಆರ್ ಶ್ರೀನಿವಾಸ್ ಗೌಡ ಅವರು ನೆರೆದ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು ಅನೇಕ ಪ್ರಶ್ನೆಗಳಿಗೆ ಸ್ಪೂರ್ತಿದಾಯಕ ಉತ್ತರ ನೀಡಿದರು ವಿದ್ಯಾರ್ಥಿಯ ಸಾಧನೆಗೆ ಅವರ

ಅಂತರಾಳದಲ್ಲಿರುವ ಚಲ ಹೆಬ್ಬಯಕೆ ಆತ್ಮವಿಶ್ವಾಸ ಮತ್ತು ಬದ್ಧತೆಗಳು ಜೀವಾಳ ನಿರಂತರ ಪರಿಶ್ರಮ ಮಾತ್ರ ನಿಮ್ಮನ್ನು ಗೆಲ್ಲಿಸುವ ಮೂಲ ಮಂತ್ರ ಎಂದು ತಮ್ಮ ಸಾಧನೆಯ ಹಾದಿಯನ್ನು ಮೆಲುಕು ಹಾಕಿ ಎಲ್ಲ ವಿದ್ಯಾರ್ಥಿಗಳನ್ನು ಮಂತ್ರಮುಗ್ಧರನ್ನಾಗಿಸಿದರು
ಈ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಳೆದ ಬಾರಿ ನಡೆದ JEE ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಅಭಿನ್.ಬಿ ಸೂರತ್ಕಲ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿರುತ್ತಾರೆ,ನೀಟ್ ಪ್ರವೇಶ ಪರೀಕ್ಷೆಯಲ್ಲಿ 720 ಅಂಕ ಗಳಿಗೆ 615 ಅಂಕಗಳಿಸಿ ಬೆಂಗಳೂರಿನ ಪ್ರತಿಷ್ಠಿತ ಸರಕಾರಿ ವೈದ್ಯಕೀಯ

ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆದಿರುವ ಗೌತಮ್ ವಿ, ಹಾಸನದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಸೀಟ್ ಪಡೆದಿರುವ ಹೆಮ್ಮೆಯ ವಿದ್ಯಾರ್ಥಿನಿ ಕು ಪ್ರಗತಿ ಎಂ ಗೌಡ ಹಾಗೂ ತಿರುಪತಿಯ ಸಂಶೋಧನಾ ಸಂಸ್ಥೆಯಲ್ಲಿ ಗಣಿತ ಸಂಶೋಧನಾ ವಿಭಾಗದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿನಿ ಕು ಪರಿಣಿತ ಎಂ ಇವರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ನೆರವೇರಿತು, ಈ ಸಾಧಕ ವಿದ್ಯಾರ್ಥಿಗಳು ಮತ್ತು ಪೋಷಕರು ಎಪಿಜೆ ಅಕಾಡೆಮಿಯ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದ್ದು ವಿಶೇಷವಾಗಿತ್ತು


ಕು ಖುಷಿ ಮತ್ತು ಕು ರಕ್ಷಿತಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಎಪಿಜೆ ಅಕಾಡೆಮಿಯ ಕಾರ್ಯದರ್ಶಿ ಶ್ರೀ ಡಿ ಮುರುಳಿ ಸ್ವಾಗತಿಸಿದರು ಚೇರ್ಮನ್ ಆಗಿರುವ ಶ್ರೀ ಸಿಕೆ ದೇವರಾಜ್ ವಂದಿಸಿದರು

LEAVE A REPLY

Please enter your comment!
Please enter your name here