ಹಾಸನ ಅ.22 : ಸುರಕ್ಷಿತ ಆರೋಗ್ಯಕ್ಕಾಗಿ ಕೈ ತೊಳೆಯುವ 6 ಹಂತಗಳನ್ನು ಬಳಸಿ ನೀರು ಮತ್ತು ಸೋಪಿನಿಂದ ಸರಿಯಾಗಿ ಕೈ ತೊಳೆದರೆ ಶೇ.40 ರಿಂದ 50 ರಷ್ಟು ಕಾಯಿಲೆಯನ್ನು ತಡೆಗಟ್ಟಬಹುದು, ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಜಿಲ್ಲಾ ಸಂಯೋಜಕರಾದ ಯೋಗನಾಥ್ ಎಂ.ಹೆಚ್ ತಿಳಿಸಿದ್ದಾರೆ.
ದುದ್ದ, ಗ್ರಾಮ ಪಂಚಾಯಿತಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೂವ್‍ಮೆಂಟ್, ಯುನಿಸೆಫ್ ಹಾಗೂ ಚಿಕ್ಕಡಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರದಲ್ಲಿ ಏರ್ಪಡಿಸಲಾಗಿದ್ದ ಜಾಗತಿಕ ಕೈ ತೊಳೆಯುವ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಂದು ಮನೆಯಲ್ಲಿ ದೇವರ ಕೊಠಡಿಗೆ ಎಷ್ಟು ಮಹತ್ವ ನೀಡುತ್ತರೋ, ಅಷ್ಟೇ ಮಹತ್ವವನ್ನು ಪ್ರತಿಯೊಂದು ಮನೆಯಲ್ಲಿ ಕೈ ತೊಳೆಯವ ವಾಷ್ ಬೇಸಿನ್‍ಗೆ ನೀಡಬೇಕು ಎಂದರು.
ಚಿಕ್ಕಡಲೂರು ಗ್ರಾಮದ ಪಂಚಾಯಿತಿ ಸದಸ್ಯರಾದ ಲೋಕೇಶ್ ಅವರು ಮಾತನಾಡಿ ಪ್ರತಿ ವರ್ಷ ಆಕ್ಟೋಬರ್ 15 ದಿನವನ್ನು ಜಾಗತಿಕ ಕೈ ತೊಳೆಯುವ ದಿನವನ್ನಾಗಿ ಆಚರಿಸುತ್ತಿರುವ ಉದ್ದೇಶ ಎಲ್ಲರಿಗೂ ಕೈ ತೊಳೆಯುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ, ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡುವುದಾಗಿದೆ, ಈ ನಿಟ್ಟಿನಲ್ಲಿ ಎಲ್ಲರು 20 ಸೆಕೆಂಡ್ ಸರಿಯಾಗಿ ಕೈ ತೊಳೆದು ಆರೋಗ್ಯ ಕಾಪಾಡಿಕೊಳ್ಳಿ ಮತ್ತು ರೋಗಿಗಳನ್ನು ಶುದ್ದವಾದ ಕೈ ಗಳಿಂದ ಆರೈಕೆ ಮಾಡಿ ಎಂದರು.
ದುದ್ದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಮಂಜು ಅವರು ಮಾತನಾಡಿ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ನೀರು ಮತ್ತು ಶೌಚಾಲಯದ ಸೌಲಭ್ಯ ಕಲ್ಪಸುವುದು ಗ್ರಾಮ ಪಂಚಾಯಿತಿಗಳ ಜವಾಭ್ದಾರಿಯಾಗಿದೆ ಈ ನಿಟ್ಟಿನಲ್ಲಿ ಆಸ್ಪತ್ರೆಗಳ ಅಭಿವೃದ್ದಿಯಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಪ್ರಮುಖವಾದುದ್ದು ಎಂದರು.
ಚಿಕ್ಕಡಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.|| ರಾಜೇಂದ್ರ ಮಾತನಾಡಿ ಪ್ರತಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳಾದ ನೀರು, ಶೌಚಾಲಯವಿದ್ದರೆ ರೋಗಿಗಳ ಆರೈಕೆ ಮಾಡುವ ಸಿಬ್ಬಂದಿಗಳು ಕೈ ಗಳ ಶುಚಿತ್ವದಿಂದ ಹಾಗೂ ಆಸ್ಪತ್ರೆ ಪರಿಸರ ಸ್ವಚ್ಚತೆ ಮಾಡಿಕೊಂಡು, ಆಸ್ಪತ್ರೆಯಲ್ಲಿ ಸೋಂಕು ರಹಿತ ವಾತಾವರಣ ನಿರ್ಮಾಣ ಮಾಡಬಹುದು ಇದರಿಂದ ಆಸ್ಪತ್ರೆಗೆ ಬರುವ ಫಲಾನುಭವಿಗಳಿಗೆ ಗುಣಮಟ್ಟದ ಸೌಲಭ್ಯ ನೀಡಲು ಸಾದ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕಡಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯರಾದ ಡಾ|| ಉಮೆ ಹರ್ಷಿಯಾ ಮತ್ತು ಆಸ್ಪತ್ರೆ ಸಿಬ್ಬಂದಿಗಳು, ಪಂಚಾಯಿತಿ ಸದಸ್ಯರಾದ ದೇವರಾಜ, ಆಶಾ ಕಾರ್ಯಕರ್ತರು ಮತ್ತು ಆಸ್ಪತ್ರೆಯ ಫಲಾನುಭವಿಗಳು ಹಾಗೂ ಎಸ್.ವಿ.ವೈ.ಎಂ ಹಾಸನ ಶಾಖೆಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 50 ಜನರು ಭಾಗವಹಿಸಿ ಜಾಗತಿಕ ಕೈ ತೊಳೆಯುವ ದಿನಾಚರಣೆಯ ಪ್ರಯೋಜನ ಪಡೆದರು, ಗೋವಿಂದ, ಗಂಗಾಧರ್, ಬಸವರಾಜು ಮತ್ತಿತರರು ಹಾಜರಿದ್ದರು.
#handwashmethods #safehands