ಎಲ್.ಪಿ.ಜಿ ಪೈಪ್ ಲೈನ್ ಹಾದು ಹೋಗುವ ರೈತರ ಭೂಮಿಗೆ ಪರಿಹಾರ

0

ಹಾಸನ ಅ.22 :  ಎಲ್.ಪಿ.ಜಿ ಪೈಪ್ ಲೈನ್ ಹಾದು ಹೋಗುವ ರೈತರ ಭೂಮಿಗೆ ಪರಿಹಾರ ನೀಡಲು ಕ್ರಮವಹಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಎಲ್.ಪಿ.ಜಿ. ಪೈಪ್ ಲೈನ್ ಹಾದು  ಹೋಗುವ ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು  ಸಂಬಂಧಪಟ್ಟ ಇಲಾಖೆಯವರಿಂದ ಮಾಹಿತಿ ಪಡೆದು ಪರಿಹಾರ ನಿಗಧಿ ಮಾಡುವಂತೆ ತಿಳಿಸಿದರು.

ಪೈಪ್ ಲೈನ್‍ಗೆ ಬಳಕೆಯಾದ ಭೂಮಿಯನ್ನು ಹೊರತುಪಡಿಸಿ ಇನ್ನುಳಿದ ಭೂಮಿಯಲ್ಲಿ ಬದಲಿ ಬೆಳೆ ಬೆಳೆಯಲು  ಅವಕಾಶ ಕಲ್ಪಿಸುವಂತೆ ಅವರು ಹೇಳಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ   ಎರಡು ಗ್ರಾಮಗಳಲ್ಲಿ ಪರಿಹಾರ ನೀಡುವ ಕುರಿತು ಸಮಸ್ಯೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ   ಬಗೆಹರಿಸುವುದಾಗಿ ತಿಳಿಸಿದರು.

ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಸಂಬಂಧಪಟ್ಟ ಮಾಹಿತಿ ಪರಿಶೀಲಿಸಿ ರೈತರಿಗೆ  ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ  ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ಹೆಚ್‍ಪಿಸಿಎಲ್ ವ್ಯವಸ್ಥಾಪಕರಾದ ದೇವಿಪ್ರಸಾದ್, ತಹಸೀಲ್ದಾರ್  ನಟೇಶ್ ಮತ್ತಿತರರು ಹಾಜರಿದ್ದರು.

#farmersnewshassan #hassan #hassannews #ರೈತಮಿತ್ರ_ಹಾಸನ್_ನ್ಯೂಸ್

LEAVE A REPLY

Please enter your comment!
Please enter your name here