ಬೇಲೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೊಬೈಲ್ ವೀಕ್ಷಣೆಯಲ್ಲಿ ತಂಗಿದ ಕೆಲವು ಇಲಾಖೆ ಅಧಿಕಾರಿಗಳು.

0

ಬೇಲೂರು ಪಟ್ಟಣದ ತಾಲೂಕು ಪಂಚಾಯಿತಿಯ ಸಬಾಂಗಣದಲ್ಲಿ ಶಾಸಕ ಎಚ್ ಕೆ ಸುರೇಶ್ ಅವರ ನೇತೃತ್ವದಲ್ಲಿ ನಡೆದ ತಾಲೂಕಿನ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್ ಕೆ ಸುರೇಶ್ ತಾಲೂಕಿನ ಸಮಸ್ತ ಅಭಿವೃದ್ಧಿಗಳ ಬಗ್ಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಸೂಕ್ಷ್ಮವಾಗಿ ಗಮನಿಸಿ ಕೆಲವು ಇಲಾಖಾ ಅಧಿಕಾರಿಗಳಿಗೆ ಸಲಹೆ ಹಾಗೂ ಎಚ್ಚರಿಕೆ ನೀಡುವ ಮೂಲಕ ಸಬೆ ನಡೆಸಿದರು

ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಬಂದಿಸಿದ ಪ್ರಮುಖವಾದ ಚರ್ಚೆಗಳು ನಡೆಯುತ್ತಿದ್ದರು ಈ ಸಭೆಗೂ ನಮಗೂ ಯಾವುದೇ ಸಂಬಂಧವಿಲ್ಲಂತೆ ಕೆಲವು ಅಧಿಕಾರಿಗಳಾದ ಮೀನುಗಾರಿಕೆ ಇಲಾಖೆ ಅಧಿಕಾರಿ ರವಿಕುಮಾರ್. ಶಿಕ್ಷಣ ಇಲಾಖೆ ನಾರಾಯಣ್. ಅಬಕಾರಿ ಇಲಾಖೆ ಚಂದನ.

ಅಕ್ಷರ ದಾಸೋಹ ಇಲಾಖೆ ಜಗದೀಶ್ ನಾಯಕ್. ಆಹಾರ ಇಲಾಖೆ ಮಂಜುನಾಥ್. ಎತ್ತಿನಹೊಳೆ ಇಲಾಖೆ ಅಧಿಕಾರಿ ತೀರ್ಥ ಕುಮಾರ್ ಸೇರಿದಂತೆ ಇನ್ನು ಮುಂತಾದ ಕೆಲವು ಇಲಾಖೆ ಅಧಿಕಾರಿಗಳು ಗಾಢವಾಗಿ ತಮ್ಮ ತಮ್ಮ ಮೊಬೈಲ್ ವೀಕ್ಷಣೆಯಲ್ಲಿ ತಂಗಿದ್ದರು ಮುಂದಾದರೆ ಇನ್ನ ಕೆಲವರು ಗಾಢವಾದ ನಿದ್ರೆಗೆ ಜಾರುವ ಮೂಲಕ ತಾಲೂಕು ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಅಗೌರವ ತೋರುವ ಜೊತೆಗೆ ಸಭೆಯ ಅಧ್ಯಕ್ಷತೆ ವಹಿಸಿದ ಶಾಸಕರು ಇದ್ದಾರೆ ಎಂಬುದು ಗಮನಿಸಿದೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾಟಾಚಾರಕ್ಕೆ ಬಂದಂತೆ ಸಭೆಯಲ್ಲಿ ಅವರ ಇಚ್ಚ ಅನುಸಾರ ಸಭೆಯಲ್ಲಿ ನಡೆದುಕೊಳ್ಳುತ್ತಿರುವುದನ್ನು ಗಮನಿಸಿದರೆ ಇವರುಗಳಿಂದ ತಾಲೂಕಿನ ಅಭಿವೃದ್ಧಿ ನಿರೀಕ್ಷಿಸಬಲ್ಲರೆ ಬೇಲೂರಿನ ಶಾಸಕರು ಎಂಬುದು ಕಂಡುಬಂದಂತೆ ಸಾಕ್ಷಿಯಾಗಿತ್ತು.

LEAVE A REPLY

Please enter your comment!
Please enter your name here