ರೈತ ಸಂಘದ ಮುಖಂಡರು ಶಾಸಕ ವಿರುದ್ಧ ವಿವಿಧ ಆರೋಪ

0

ಪ್ರತಿಭಟನೆ ಖಂಡಿಸಿ ಪ್ರತಿಭಟನೆ
ರೈತಸಂಘ-ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಬೇಲೂರು: ಪಟ್ಟಣದಲ್ಲಿಂದು ಸ್ಥಳೀಯ ಶಾಸಕರ ವಿರುದ್ಧ ಪ್ರತಿಭಟನೆಗೆ
ಕುಳಿತಿದ್ದ ರೈತಸಂಘದ ವಿರುದ್ಧ ಜೆಡಿಎಸ್ ಮುಖಂಡರು, ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ರೈತ ಸಂಘದ ಮುಖಂಡರು ಶಾಸಕ ಕೆ.ಎಸ್.ಲಿಂಗೇಶ್ ವಿರುದ್ಧ ವಿವಿಧ ಆರೋಪ ಹೊರಿಸಿ ಧರಣಿಗೆ ಮುಂದಾಗಿದ್ದರು.
ಶಾಸಕರ ವಿರುದ್ಧ ಪ್ರತಿಭಟಿಸುತ್ತಿದ್ದ ರೈತ ಸಂಘ ಮುಖಂಡರ ವಿರುದ್ಧ ಜೆಡಿಎಸ್ ಬೆಂಬಲಿಗರೂ

ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ತಾಲೂಕು ಯುವ ಘಟಕದ ಅಧ್ಯಕ್ಷ ಉಮೇಶ್, ರೈತರ ಹೆಸರಿನಲ್ಲಿ ಹಸಿರು ಶಾಲು ಹೊದ್ದು ನಕಲಿ ರೈತರು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಏಜೆಂಟರು ಪ್ರತಿಭಟನೆ ಮಾಡುತ್ತಿರುವುದು ಕಾಣುತ್ತಿದೆ ಎಂದು ದೂರಿದರು.
ನಿಜವಾದ ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶದಲ್ಲಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿರುವ ನಕಲಿ ರೈತರು ಕಾಂಗ್ರೆಸ್, ಬಿಜೆಪಿ ಏಜೆಂಟರಂತೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಶಾಸಕರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಪುಸ್ತಕದ ಮೂಲಕ ಜನತೆ ಮುಂದೆ ತೋರಿಸಿದ್ದಾರೆ. ಅವರೂ

ಕೂಡ ರೈತ ಕುಟುಂಬದ ಮಗನಾಗಿದ್ದು, ಎಲ್ಲಿಯೂ ಸಹ ಲಂಚ ಪಡೆದಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದು, ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ದಿಶಾ ಸಮಿತಿ ಸದಸ್ಯ ನವೀನ್ ಹಾಗೂ ಜೆಡಿಎಸ್ ಮುಖಂಡ ಹಗರೆ ದಿಲೀಪ್ ಶಾಸಕರ ವಿರುದ್ಧ ಸುಳ್ಳು ಅಪಪ್ರಚಾರ ಮಾಡುತ್ತಾ ಜನಸಾಮಾನ್ಯರನ್ನ ಎತ್ತು ಕಟ್ಟುತ್ತಿರುವ ಈ ನಕಲಿ ರೈತರ ಬಗ್ಗೆ ತಾಲೂಕಿನ ಜನತೆಗೆ ಗೊತ್ತಿದೆ. ಶಾಸಕರು ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇವರೆಲ್ಲಾ

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಎಂಜೆಂಟರುಗಳನ್ನೆಲ್ಲಾ ಕರೆದುಕೊಂಡು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ಕೆಲವರು ಪುರಸಭೆ ನಾಮಿನಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರೂ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ. ನಿಜವಾದ ರೈತರ ಬಗ್ಗೆ ನಮಗೂ ಗೌರವವಿದ್ದು ನಾವೂ ಅವರ ಜೊತೆ ಸೇರಿ ಪಕ್ಷಾತೀತವಾಗಿ ಪ್ರತಿಭಟನೆ ಮಾಡುತ್ತೇವೆ. ಯಾರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಶಾಸಕರಿಗೆ ಮಾಹಿತಿ ಕೊಡದ ಇವರು, ಭ್ರಷ್ಟಾಚಾರದಲ್ಲಿ ಇವರೂ ಕೂಡ

ಭಾಗಿಯಾಗಿದ್ದಾರೆ. ಅದಕ್ಕೆ ನಮ್ಮಲ್ಲೂ ಸಹ ದಾಖಲಾತಿ ಇದೆ. ಈ ನಕಲಿ ರೈತರ ವಿರುದ್ಧ ನಾವೂ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ರೈತಸಂಘ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಡಿವೈಎಸ್‌ಪಿ ಅಶೋಕ್, ಪಿಐ ರವಿಕಿರಣ್, ಪಿಎಸ್‌ಐ ಎಸ್.ಜಿ. ಪಾಟೀಲ್ ಸ್ಥಳದಲ್ಲಿದ್ದರು.

LEAVE A REPLY

Please enter your comment!
Please enter your name here