ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ : ನೋಡ ನೋಡುತ್ತಿದ್ದಂತೆ ಎರಡು ಹಸು ಹಾಗೂ ಒಂದು ಕರು ಜೀವಂತವಾಗಿ ಆಹುತಿ : ರೈತನ ಗೋಳು ಮುಗಿಲು‌ ಮುಟ್ಟಿದೆ

0

ಹಾಸನ / ಅರಸೀಕೆರೆ : ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆಯ ಯರಿಗೇನಹಳ್ಳಿ ಗ್ರಾಮದ ಮಂಜುನಾಥ್ (ರೈತ) ರವರ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿದ್ದ ಎರಡು ಹಸು ಹಾಗೂ ಒಂದು ಕರು ಜೀವಂತವಾಗಿ ಆಹುತಿಯಾಗಿವೆ.

ಘಟನೆ : ಡಿ.15 ರಾತ್ರಿ‌ ಬುಧವಾರ ರಾತ್ರಿ 7-30ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಲ್ಲೇ ಇದ್ದ ಸ್ಥಳೀಯರು ಜಮೀನಿನ ಮಾಲೀಕ ಹಾಗೂ ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅವರು ಬಂದು ಬೆಂಕಿ ನಂದಿಸುವಷ್ಟರಲ್ಲಿ ಪ್ರೀತಿಯಿಂದ ಸಾಕಿದ್ದ ಎರಡು ಹಸು– ಕರು ಬೆಂದು ಹೋಗಿದ್ದು ಊರ ಗ್ರಾಮಸ್ಥರ ಕಣ್ಣಲ್ಲು ನೀರು ತರಿಸುವಂತಿತ್ತು

” ಹಸ್ಗೊಳು ಜೀವಂತ್ವಾಗಿ ಸುಟ್ಟು ಹೋಗಿರುವುದ್ ಹೊಟ್ಟೆ ಉರಿತೈತೆ ಸಾ.. ದಿನಾ ಅವ್ಗಳ್ಜೊತೆನೆಯ ಇರ್ತಿದ್ದೆ , ಮರೆಯಕ್ ಆಯ್ತಿಲ್ಲ ಸಾ.. , ನಮ್ ಜೀವ್ನುಕ್ಕು ಅವೇ ಆದಾರ್ವಾಗಿದ್ವು ಸಾ.. ಲಕ್ಷಾಂತರ ರೂಪಾಯಿ ಕಾಸ್ ಹೋಯ್ತು ” ಎಂದು ಅಳಲು ತೋಡಿಕೊಂಡ ಮಂಜುನಾಥ್ ಬೇಸರ ವ್ಯಕ್ತ ಪಡಿಸಿದ್ದು ಹೀಗೆ !!

LEAVE A REPLY

Please enter your comment!
Please enter your name here