ಹಾಸನ ಶಾಖೆಯ ಐಶರ್ ಟ್ರ್ಯಾಕ್ಟರ್ಸ್ ಶೋರೂಮಿನಲ್ಲಿ ಆಯೋಜಿಸಿದ್ದ ರೈತರಿಗೆ ಐಷರ್ ಟ್ರ್ಯಾಕ್ಟರ್, ವಿತರಣಾ ಕಾರ್ಯಕ್ರಮದಲ್ಲಿ ಭಾರತ ದೇಶದ ಮಾರಾಟ ವಿಭಾಗದ (E.V.P) ಮುಖ್ಯಸ್ಥರಾದ ಶ್ರೀ ಆಶೀಶ್ ಗುಪ್ತರವರು , ಕರ್ನಾಟಕ ರಾಜ್ಯ ಮಾರಾಟ ಮುಖ್ಯಸ್ಥರಾದ ಎಂ.ಎಸ್. ಮತ್ತು ವಿಶ್ವೇಶ್ ರವರು , ವಿಶ್ವನಾಥ್ ಪಾಟೀಲ್ ( ಏರಿಯಾ ಮ್ಯಾನೇಜರ್ )ಅರ್ಹ ರೈತರಿಗೆ ಟ್ಯಾಕ್ಟರ್ ವಿತರಣೆ ಮಾಡಿದರು. ಆನಂತರ






ರೈತರೊಂದಿಗೆ ಟ್ಯಾಕ್ಟರ್ ಬಗ್ಗೆ ಸಂಭಾಷಣೆ ನಡೆಸಿದರು. ಈ ಕಾರ್ಯಕ್ರಮದಲ್ಲಿದ್ದ ರೈತರಿಗೆ ರಾಜ್ಯ ಮುಖ್ಯಸ್ಥರು ಸಹ ಟ್ಯಾಕ್ಟರ್ ಬಗ್ಗೆ ಸವಿವರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಹಾಸನ ಶಾಖೆಯ ಐಶರ್ ಟ್ಯಾಕ್ಟರ್ಸ್ ಶೋರೂಂ ಮಾಲೀಕರಾದ
ಪ್ರೀತಮ್ ಗೌಡ ರವರು ರೈತರಿಗೆ, ಕಂಪನಿಯ ಮುಖ್ಯಸ್ಥರಿಗೆ ಧನ್ಯವಾದ ತಿಳಿಸಿದರು. ಕಂಪನಿಯ ವಿಭಾಗೀಯ ಮಾರಾಟ ಪ್ರತಿನಿಧಿ ನವೀನ್ ಮತ್ತು ಹಾಸನ ಟ್ಯಾಕ್ಟರ್ ಶೋರೂಂ ಮಾರಾಟ ಪ್ರತಿನಿಧಿಗಳು ಭಾಗವಹಿಸಿದ್ದರು.