ಕೆರೆ ಅಭಿವೃದ್ಧಿ ನಂತರ ಸ್ವಚ್ಛವಾಗಿಟ್ಟುಕೊಂಡು ಸಂರಕ್ಷಿಸುವುದು
ನಾಗರಿಕರ ಜವಾಬ್ದಾರಿ: ಶಾಸಕ ಪ್ರೀತಂ ಜೆ. ಗೌಡ
ಹಾಸನ: ಒಂದು ಕರೆ ಅಭಿವೃದ್ಧಿ ನಂತರ ನಿರಂತರವಾಗಿ ಸ್ವಚ್ಛವಾಗಿಟ್ಟುಕೊಂಡು ಸಂರಕ್ಷಿಸುವ ಜವಬ್ಧಾರಿ ಅಲ್ಲಿನ ಸ್ಥಳೀಯ ನಾಗರೀಕರದು ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದರು.
ನಗರದ ಅಡ್ಲಿಮನೆ ರಸ್ತೆ ಬಳಿ ಇರುವ ಚಿಕ್ಕಟ್ಟೆ ಕೆರೆ ಆವರಣದಲ್ಲಿ ಕೆರೆ ಅಭಿವೃದ್ಧಿ ಸಂಘ, ಹಸಿರು ಭೂಮಿ ಪ್ರತಿಷ್ಠಾನ ಸಂಯೋಜಿತ ಚಿಕ್ಕಟ್ಟೆ ಕೆರೆ ಹಬ್ಬ ಕಾರ್ಯಕ್ರಮದಲ್ಲಿ ಉದ್ಧೇಶಿಸಿ ಮಾತನಾಡಿದ ಅವರು,
ಕೆರೆಯ ಏರಿಗಳನ್ನು ಮತ್ತಷ್ಟು ಭದ್ರಗೊಳಿಸಿ, ಪ್ರವಾಸಿ ತಾಣದ ಮಾದರಿ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನದು ಎಂದು ಶಾಸಕ ಪ್ರೀತಂ ಜೆ.ಗೌಡ ಭರವಸೆ ನೀಡಿದರು. ಕೆರೆಯನ್ನು ಅಭಿವೃದ್ಧಿ ಮಾಡಿದ ಬಳಿಕ ಅದನ್ನು ಸ್ವಚ್ಛವಾಗಿಟ್ಟುಕೊಂಡು ಸಂರಕ್ಷಿಸಿಕೊಂಡು ಹೋಗುವುದು ನಾಗರಿಕರ ಜವಾಬ್ದಾರಿ. ಹಿಂದೆ ಕೆರೆ, ಬಾವಿಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿತ್ತು. ಆದರೇ
ಈಗ ಕಾಲ ಬದಲಾಗಿದ್ದು, ಎಲ್ಲಾ ಕಡೆ ಪೈಪ್ ಮೂಲಕ ನಲ್ಲಿಯಲ್ಲಿ ನೀರು ಮನೆಯ ಒಳಗೆ ಬರುತ್ತಿದೆ. ಹಾಗಾಗಿ ಜನರಲ್ಲಿ ಕೆರೆಗಳ ಮಹತ್ವ ಗಣನೀಯವಾಗಿ ಕಡಿಮೆ ಆಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಚನ್ನಪಟ್ಟಣ ಕೆರೆ ಒಂದಕ್ಕೆ ೧೪೪ ಕೋಟಿ ರೂ. ಖರ್ಚು ಮಾಡುವುದು ಬೇಡ ಎಂದು ಹಿರಿಯರ ಸಲಹೆಯಂತೆ
ಅನುದಾನವನ್ನು ೬ ಕೆರೆ ಹಾಗೂ ೯ ಉದ್ಯಾನಗಳ ಅಭಿವೃದ್ಧಿಗೆ ಹಂಚಿಕೆ ಮಾಡಲಾಯಿತು. ಜೊತೆಗೆ ಜವೇನಹಳ್ಳಿಕೆರೆಗೆ ಮೂರುವರೆ ಕೋಟಿಗೆ ಚಾಲನೆ ಕೊಡಲಾಗಿದೆ. ಮತ್ತು ಚಿಕ್ಕಟ್ಟೆ ಕೆರೆಯನ್ನೂ ಅಭಿವೃದ್ಧಿ ಪಡಿಸಲಾಗುವುದು. ವಾಕಿಂಗ್ ಪಾತ್ ನಿರ್ಮಾಣ, ಮಳೆಗಾಲದಲ್ಲಿ ಕೆರೆಗೆ ನೀರು ಜಾಸ್ತಿ ಆದರೆ ಏರಿ ಒಡೆಯದಂತೆ ಕೆಳಭಾಗದ ಏರಿಗೆ ಕಲ್ಲು ಕಟ್ಟಿಸುವುದು, ನಾಗರಿಕರು ಕುಳಿತುಕೊಳ್ಳಲು ವಿಶ್ರಾಂತಿ ಮಂಟಪ ನಿರ್ಮಿಸಲಾಗುವುದು ಎಂದರು. ಎಲ್ಲರ ಸಹಕಾರದಿಂದ
ಹಾಸನದ ಮೇಲು ಸೇತುವೆ ಕಾಮಗಾರಿ ಸುಗಮವಾಗಿದಂತೆ ಈ ರಸ್ತೆಯ ಕಾಮಗಾರಿಯು ಆಗುತ್ತದೆ. ಆದರೇ ಇದರ ಕೆಟ್ಟ ಹೆಸರು ನನಗೆ ಕೊಟ್ಟರೂ ಜೀರ್ಣಿಸಿಕೊಳ್ಳುವ ಶಕ್ತಿ ಭಗವಂತ ನಂಗೆ ಕೊಡುವಂತೆ ಕೇಳುತ್ತೇನೆ. ರಸ್ತೆ ಸಮಸ್ಯೆ ಶೀಘ್ರ ಬಗೆಹರಿದು ಸಾರ್ವಜನಿಕರ ಅನುಕೂಲಕ್ಕೆ ಸಿಗಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಉಪವಿಭಾಗಾಧಿಕಾರಿ ಹಾಗೂ ಹಸಿರು ಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಹೆಚ್.ಎಲ್. ನಾಗರಾಜು ಮಾತನಾಡುತ್ತಾ, ಭೂಮಿ ಮೇಲೆ ಇರುವ ಕೆರೆ. ಗುಂಡು ತೋಪು ಹಾಗೂ ಸ್ಮಶಾನದ ಜಾಗವನ್ನು ಯಾವುದೇ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ
ನಮ್ಮ ಸುತ್ತಲಿನ ಕೆರೆ ಹಾಗೂ ಜಲ ಮೂಲಗಳನ್ನು ಸಂರಕ್ಷಿಸಿ, ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎಲ್ಲರ ಕರ್ತವ್ಯ ಎಂದರು. ತೀವ್ರ ಬರಗಾಲ ಉಂಟಾಗಿತ್ತು. ಅ ಸಂದರ್ಭದಲ್ಲಿ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಯಿತು. ನಂತರದ ದಿನಗಳಲ್ಲಿ ಕಾರ್ಯೋನ್ಮಖರಾದ ಹಸಿರು ಭೂಮಿ ಪ್ರತಿಷ್ಠಾನ. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಾಕಷ್ಟು ಕೆರೆಗಳನ್ನು ಪುನಷ್ಚೇತನ ಮಾಡುವಲ್ಲಿ ಯಶ್ವಸ್ವಿಯಾಗಿದೆ. ಈ ರೀತಿ ಕೆರೆಗಳ ಸಂರಕ್ಷಣೆ ಮಾಡುವುದರಿಂದ ಅಂತರ್ಜಲದ ಮಟ್ಟವು ಏರಿಕೆಯಾಗಲಿದೆ. ಈಗಾಗಲೇ ಚಿಕ್ಕಟ್ಟೆ ಕೆರೆ ಸ್ವಚ್ಛತೆ ಆಗಿದ್ದು, ಮುಂದೆ ಯಾರು ತ್ಯಾಜ ಸುರಿಯದಂತೆ, ಕೊಳಚೆ ನೀರು ಸೇರದಂತೆ ನೋಡಿಕೊಳ್ಳುವುದು ಸ್ಥಳೀಯರ ಕರ್ತವ್ಯ. ಜವೇನಹಳ್ಳಿ ಕೆರೆ ಮಾದರಿ ಸುತ್ತಲು ಫೆನ್ಸಿಂಗ್ ಹಾಕಿಸಿ ಕೆರೆ ಸಂರಕ್ಷಿಸಬೇಕು. ಜವೇನಹಳ್ಳಿಕೆರೆ ಪಕ್ಕದಲ್ಲಿ ನಿರ್ಮಿಸಿರುವ ರೀತಿ ಇಲ್ಲಿಯೂ ಉದ್ಯಾನ ನಿರ್ಮಾಣ ಮಾಡಬೇಕು. ವಾಯುವಿಹಾರಕ್ಕೆ ಬರವವರಿಗೆ ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಚಿಕ್ಕಟ್ಟೆ ಹಬ್ಬದ ಅಂಗವಾಗಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೇ ಆಯೋಜಿಸಿ ವಿಜೇತರಿಗೆ ಬಹುಮಾತ ವಿತರಿಸಲಾಯಿತು. ಕಾರ್ಯಕ್ರಮ ಮೊದಲು ಸಿಂಚನ ಭರತನಾಟ್ಯ ಪ್ರದರ್ಶನ ಮಾಡಿ ಗಮನಸೆಳೆದರು. ಬಾಲಕ ಸುಜನ್ ಕೆರೆ ಸಂರಕ್ಷಣೆ ಬಗ್ಗೆ ಭಾಷನ ಮಾಡಿ ಜಾಗೃತಿ ಮೂಡಿಸಿದರು.
ಇದೆ ವೇಳೆ ಚಿಕ್ಕಟ್ಟೆ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉಪೇಂದ್ರಕುಮಾರ್, ಉಪಾಧ್ಯಕ್ಷ ಆರ್.ಆನಂದ್, ಶರತ್ ಭೂಷಣ್, ಖಜಾಂಚಿ ಸತೀಶ್ ಕುಮಾರ್, ಸುಜಾತಾ ನಾರಾಯಣಗೌಡ, ವೈ.ಎಸ್. ವೀರಭದ್ರಪ್ಪ, ೧೬ನೇ ವಾರ್ಡಿನ ನಗರಸಭೆ ಸದಸ್ಯರಾದ ಪ್ರಶಾಂತ್ ನಾಗರಾಜ್, ೧೭ನೇ ವಾರ್ಡಿನ ಸದಸ್ಯೆ ರೋಹಿನ್ ತಾಜ್, ಅಶು ಆಸೀಫ್, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಸದಸ್ಯ ಆರ್.ಪಿ. ವೆಂಕಟೇಶಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ.ಪಿ. ಮಂಜುನಾಥ್, ಖಜಾಂಚಿ ಸತೀಶ್ ಕುಮಾರ್ (ವಿಪ್ರೊ), ರಂಗಸ್ವಾಮಿ, ತಿಮ್ಮರಾಜಶೆಟ್ಟಿ, ಭಾರತ್ ಸೇವಾದಳದ ಜಿಲ್ಲಾ ಸಂಘಟಕಿ ವಿ.ಎಸ್. ರಾಣಿ, ಸ್ಕೌಟ್ ಅಂಡ್ ಗೈಡ್ಸ್ ನ ಹಿರಿಯರು ಕಾಂಚನಾ ಮಾಲಾ, ವೇದಶ್ರೀ ಇತರರು ಪಾಲ್ಗೊಂಡಿದ್ದರು.