ಹಾಸನ: ವ್ಯವಹಾರದ ವಿಚಾರವಾಗಿ ಉಂಟಾದ ಮನಸ್ತಾಪದ ಹಿನ್ನೆಲೆ ಗಂಗಾಮಾತೆ ಮೇಲೆ ಆಣೆ ಪ್ರಮಾಣ ಮಾಡಲು ಹೋದ ಯುವಕರಿಬ್ಬರು
ಕೆರೆಗೆ ಬಿದ್ದು ದುರಂತ ಅಂತ್ಯ ಕಂಡ ಘಟನೆ ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ಸಂಭವಿಸಿದೆ. ಚಂದ್ರು(35) ಮತ್ತು ಆನಂದ್(30) ಮೃತರು.ಸಿಹಿ ತಿಂಡಿ ತಯಾರಿಸುವ ಕೆಲಸಕ್ಕೆ ಹಣ ಪಡೆದು ಕೆಲಸಕ್ಕೆ ಹೋಗದ ಕಾರಣ ಇಬ್ಬರನ ನಡುವೆ
ಮಾತಿನ ಚಕಮಕಿ ನಡೆದಿತ್ತು. ಇದೇ ವಿಚಾರವಾಗಿ ಗಂಗೆ(ನೀರು) ಮೇಲೆ ಆಣೆ ಮಾಡಲು ಗುರುವಾರ ರಾತ್ರಿ ಇವರಿಬ್ಬರೂ ತೇಜೂರು ಕೆರೆ ಬಳಿಗೆ ತೆರಳಿದ್ದರು. ಈ ವೇಳೆ
ಕಾಲುಜಾರಿ ಕೆರೆಗೆ ಬಿದ್ದ ಇಬ್ಬರೂ ನೀರಲ್ಲೇ ಮುಳುಗಿ ಮೃತಪಟ್ಟಿದ್ದಾರೆ. ಇಂದು(ಶುಕ್ರವಾರ) ಬೆಳಗ್ಗೆ ಮೃತದೇಹಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ