ಹಾಸನ: ನಗರದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನವಜಾತ ಶಿಶುಗಳ ಐಸಿಯು ವಾರ್ಡ್ನಲ್ಲಿ ಎಸಿಯ ಸ್ಟೆಬಿಲೈಸರ್ ಸ್ಫೋಟಗೊಂಡಿದ್ದು, ವಾರ್ಡ್ನಲ್ಲಿದ್ದ ಎಲ್ಲ 24 ಶಿಶುಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಎಲ್ಲ ಶಿಶುಗಳು ಆರೋಗ್ಯದಿಂದ ಇದ್ದು, ಯಾವುದೇ ತೊಂದರೆ ಆಗಿಲ್ಲ.
ಭಾನುವಾರ ಮಧ್ಯಾಹ್ನ ವಾರ್ಡ್ನ ಸ್ಟೆಬಿಲೈಸರ್ ಸ್ಫೋಟಗೊಂಡು ಹೊಗೆ ತುಂಬಿಕೊಂಡಿತ್ತು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ
ಆಸ್ಪತ್ರೆ ಸಿಬ್ಬಂದಿ, ಕಿಟಕಿ ಗಾಜುಗಳನ್ನು ಒಡೆದು ಎಲ್ಲ ಶಿಶುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದರು.
ಆಸ್ಪತ್ರೆಯ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸಿಯ ಸ್ಟೆಬಿಲೈಸರ್ ಸ್ಫೋಟಗೊಂಡು ಹೊಗೆ ತುಂಬಿಕೊಂಡಿತ್ತು. 24 ಶಿಶುಗಳನ್ನು
ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಆವರಿಸಿದ್ದ ಹೊಗೆಯನ್ನು ನಿವಾರಿಸಿದ ಬಳಿಕ ಮಕ್ಕಳನ್ನು ಮರಳಿ ಐಸಿಯುಗೆ ಸ್ಥಳಾಂತರಿಸಲಾಗಿದೆ. ಎಲ್ಲ ಮಕ್ಕಳು ಸುರಕ್ಷಿತವಾಗಿದ್ದಾರೆ. ಯಾವುದೇ ಮಕ್ಕಳ ಅರೋಗ್ಯದ ಮೇಲೆ ಪರಿಣಾಮ ಆಗಿಲ್ಲ. ನವಜಾತ ಶಿಶುಗಳ ಪರೀಕ್ಷೆ ನಡೆಸಿ ಪೋಷಕರಿಗೆ ತೋರಿಸಲಾಗಿದೆ. ಯಾವ ಪೋಷಕರೂ
ಆತಂಕ ಪಡುವ ಅಗತ್ಯ ಇಲ್ಲ‘ ಎಂದು ಹಿಮ್ಸ್ನ ಮಕ್ಕಳ ತಜ್ಞ ಡಾ.ಮನುಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.