ಜಾವಗಲ್: ಹೋಬಳಿಯಾದ್ಯಂತ ಸೋಮವಾರ ಎಲ್ಲಾ ಶಾಲೆಗಳಲ್ಲಿ ಭೌತಿಕ ತರಗತಿಗಳು ಪುನರಾರಂಭಗೊಂಡಿದ್ದು, ಕೊರೊನಾ ವೈರಾಣು ಭಯದಿಂದ ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲಿ ಉಳಿದಿದ್ದ ಮಕ್ಕಳು ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳನ್ನು ಗುಲಾಬಿ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಿಡಿಒ ರವಿ ಮಾತನಾಡಿ ಕೊರೋನಾ ರೋಗ ಹರಡದಂತೆ ವಾರಕ್ಕೊಮ್ಮೆ ಪಂಚಾಯಿತಿ ವತಿಯಿಂದ ಎಲ್ಲಾ ಶಾಲಾ ಕಾಲೇಜುಗಳ ಕೊಠಡಿ ಸ್ಯಾನಿಟೈಸ್ ಮಾಡಲಾಗುತ್ತದೆ. ಅಂಗನವಾಡಿ ಸುತ್ತ ಮುತ್ತ ಜಾಗ ಇದ್ದು. ಪೊಷ್ಟಿಕಾಂಶವುಳ್ಳ ತರಕಾರಿ, ಸೊಪ್ಪುಗಳನ್ನು ಆವರಣದಲ್ಲಿ ಬೆಳೆಯುವಂತೆ ಸಲಹೆ ನೀಡಿದರು.
ಬಳಿಕ ಮಾತನಾಡಿದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ನರಸಿಂಹಸ್ವಾಮಿಮಕ್ಕಳ ಆರೋಗ್ಯದ ಸುರಕ್ಷತೆ ಹಿತದೃಷ್ಟಿಯಿಂದ ವಯಸ್ಸಿಗನುಗುಣವಾಗಿ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಶುಚಿಯಾಗಿರುವಂತೆ ಪೋಷಕರು ಜಾಗ್ರತೆ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜಸ್ವ ನಿರೀಕ್ಷಕ ಗೋವಿಂದರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ಕೆ.ಚಂದ್ರಶೇಖರ್, ಅರುಣ್, ಲಕ್ಷ್ಮೀ ರವಿಶಂಕರ್, ವೈದ್ಯಾಧಿಕಾರಿ ಡಾ.ಅಶೋಕ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ನರಸಿಂಹಮೂರ್ತಿ, ಗ್ರಾಮ ಲೆಕ್ಕಿಗ ರಾಘವೇಂದ್ರ, ಲಯನ್ಸ್ ಕ್ಲಬ್ ನ ಶಿವಾನಂದ್, ಬಿಂದು ಮಾಧವ, ಅನಿಲ್ ಕುಮಾರ್, ಶ್ರೀನಿವಾಸ್, ಅಂಗನವಾಡಿ ಕಾರ್ಯಕರ್ತೆ ಕವಿತಾ ಮತ್ತಿತರರು ಇದ್ದರು
ನಂತರ ಜಾವಗಲ್ ನ ಧನ್ಯಶಾಲೆ, ನೇರ್ಲಿಗೆ ಶಾಲೆ, ತಿಮ್ಮನಹಳ್ಳಿ ಶಾಲೆಗಳಲ್ಲೂ ಸ್ವಾಗತ ಕಾರ್ಯಕ್ರಮ ನಡೆಯಿತು
Photo1. ಜಾವಗಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳನ್ನು ಗುಲಾಬಿ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಿದರು.
Photo 2.ಜಾವಗಲ್ ನ ಧನ್ಯ ಶಾಲೆಯಲ್ಲಿ ಮಕ್ಕಳನ್ನು ಗುಲಾಬಿ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಿದರು