ಹೊಳೆನರಸೀಪುರದ ನೂತನ ಪ್ರಭಾರ ತಹಸೀಲ್ದಾರ್ ಆಗಿ ಕೆ.ಕೆ.ಕೃಷ್ಣ ಮೂರ್ತಿ ಅಧಿಕಾರ ಸ್ವೀಕಾರ.

0

ಹೊಳೆನರಸೀಪುರ;ಸಕಲೇಶಪುರ ಮೂಲದ ಕೆ.ಕೆ.ಕೃಷ್ಣಮೂರ್ತಿ ಅವರು ಇಂದು ಹೊಳೆನರಸೀಪುರದ ನೂತನ ಪ್ರಭಾರ ತಹಸೀಲ್ಧಾರ್ ಆಗಿ, ನಿರ್ಗಮಿತ ತಹಸೀಲ್ಧಾರ್ ಕೆ.ಆರ್.ಶ್ರೀನಿವಾಸ್ ಅವರಿಂದ ಅಧಿಕಾರವನ್ನು ಸ್ವೀಕರಿಸಿದರು,

ಕಳೆದ ಎರಡು ವರ್ಷ ನಾಲ್ಕು ತಿಂಗಳು ಹೊಳೆನರಸೀಪುರದ ತಹಸೀಲ್ದಾರ್ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದ, ಕೆ.ಆರ್.ಶ್ರೀನಿವಾಸ್ ಅವರು ಉನ್ನತ ವ್ಯಾಸಂಗಕ್ಕಾಗಿ ವರ್ಗವಣೆಯನ್ನು ಬಯಸಿದ್ದು,ಅವರು ಬೆಂಗಳೂರಿನ ಕಂದಾಯ ಇಲಾಖೆಗೆ ವರದಿಮಾಡಿಕೊಳ್ಳಲಿದ್ದು ಅವರಿಗೆ ಇನ್ನೂ ಸರ್ಕಾರವು ಸ್ಥಳ ನಿಯೋಜನೆಯನ್ನು ಮಾಡಿಲ್ಲ,

ತಮ್ಮ ಸೇವಾ ಅವಧಿಯಲ್ಲಿ ಶಕ್ತಿ ಮೀರಿ ಜನ ಪರ ಕೆಲಸವನ್ನು ಮಾಡಿದ್ದು ಎಲ್ಲಾ ಅಧಿಕಾರಿ ವೃಂದದವರಿಗೆ ಮತ್ತು ಸಾರ್ವಜನಿಕರಿಗೆ ನಿರ್ಗಮಿತ ತಹಸೀಲ್ಧಾರ್ ಧನ್ಯವಾದಗಳನ್ನು ತಿಳಿಸಿದ್ದಾರೆ,
ಅಧಿಕಾರವನ್ನು ಸ್ವೀಕರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭಾರ ತಹಸೀಲ್ಧಾರ್ ಕೆ.ಕೆ.ಕೃಷ್ಣಮೂರ್ತಿ ಜನತಾ ಜನಾರ್ಧನರ ಸೇವೆಮಾಡಲು ಸದಾ ಸಿದ್ಧವಿರುವುದಾಗಿ ಭರವಸೆಯನ್ನು ನೀಡಿದರು,

ವರದಿ: ವಿಶ್ವಕವಿ ಹೊಳೆನರಸೀಪುರ

LEAVE A REPLY

Please enter your comment!
Please enter your name here