ಕಾಂಟ್ರಾಕ್ಟರ್​​​ ಕಿಡ್ನಾಪ್ ಯತ್ನ ಕೇಸ್​ ; ಕೋಲಾರದ ಆಂತರಿಕ ಭದ್ರತೆ ಇನ್ಸ್​ಪೆಕ್ಟರ್​ ಸೇರಿ 6 ಮಂದಿ ಬಂಧನ..!

0

ಹಾಸನ : ಸುಲಿಗೆಗಾಗಿ ಕಾಂಟ್ರಾಕ್ಟರ್ ಅಶ್ವಥ್​​​ನಾರಾಯಣಗೌಡ​ ಅಪಹರಣಕ್ಕೆ ಯತ್ನಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ​​​​​ ಅಶ್ವಥ್​​ ನಾರಾಯಣಗೌಡ​ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಆಪ್ತ ಕಾಂಟ್ರಾಕ್ಟರ್ ಆಗಿದ್ದರು. ಬೆಂಗಳೂರಿನ ಲೋಹಿತ್​ ಕುಮಾರ್​​​, ಪ್ರವೀಣ್​ ನೇಪಾಳಿ ಎಸ್ಕೇಪ್​​ ಆಗಿದ್ದಂತವರು. ಇನ್ಸ್​ಪೆಕ್ಟರ್​ ಅಶೋಕ್​​​ ಕಿಡ್ನಾಪ್​​ ತಂಡದ ಮಾಸ್ಟರ್​​ ಮೈಂಡ್ ಆಗಿದ್ದು, ಒಂದು ತಿಂಗಳ ಹಿಂದೆಯೇ ಕಾಂಟ್ರಾಕ್ಟರ್​​ ಕಿಡ್ನಾಪ್​​ಗೆ ಸ್ಕೆಚ್​ ಹಾಕಿದ್ದರಂತೆ. ತೇಜಸ್ವಿ, ಅರವಿಂದ್​ ಕಾಂಟ್ರಾಕ್ಟರ್​​ ಚಲನವಲನದ ಮೇಲೆ ಅಗಾಗ್ಗೆ ಕಣ್ಣಿಟ್ಟಿದ್ದರು. , ಅಶ್ವಥ್​ ನಾರಾಯಣಗೌಡ ಅವರು ಅಕ್ಟೋಬರ್​​ 10ರಂದು ಚನ್ನರಾಯಪಟ್ಟಣದಲ್ಲಿರುವ ತಮ್ಮ ನಿವಾಸದಿಂದ ಮನೆಯಿಂದ ಹೊರಗಡೆ ಹೋಗಿದ್ದ ಸಮಯದಲ್ಲಿ . ಸೂರನಹಳ್ಳಿ ಬಳಿ ಗೌಡರ ವಾಹನ ಅಡ್ಡಗಟ್ಟಿ ಕಾರಿನ ಮೇಲೆ ಅಟ್ಯಾಕ್​​ ಮಾಡಲಾಗಿದ್ದು, ಅಶ್ವಥ್​ ನಾರಾಯಣಗೌಡ ಪ್ಲಾನ್​ ಮಾಡಿ ವೇಗವಾಗಿ ಹಿಂದಕ್ಕೆ ಕಾರ್​​​​ ಚಲಿಸಿದ್ದು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು . ಸಿಕ್ಕಿ ಬೀಳೋ ಭೀತಿಯಿಂದ ಫಾರ್ಚುನರ್ ವಾಹನದಲ್ಲಿ ಆರೋಪಿಗಳು ಎಸ್ಕೇಪ್​ ಆಗಿದ್ದರು.

ಕಾಂಟ್ರಾಕ್ಟರ್​​​​ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮೇರೆಗೆ , ಕಾಂಟ್ರಾಕ್ಟರ್​​​ ಕಿಡ್ನಾಪ್ ಯತ್ನ ಕೇಸ್​ನಲ್ಲಿ ಕೋಲಾರದ ಆಂತರಿಕ ಭದ್ರತೆ ಇನ್ಸ್​ಪೆಕ್ಟರ್​ ಸೇರಿ 6 ಮಂದಿ ಬಂಧನವಾಗಿದೆ. ಹಾಸನ ಪೊಲೀಸರಿಂದ ಬಹುದೊಡ್ಡ​​ ಕಾರ್ಯಾಚರಣೆ ನಡೆದಾಗಿದೆ., ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್​​​​ ಅಶೋಕ್ , ಬೆಂಗಳೂರು ಕುಡಿಯುವ ನೀರು ಸರಬರಾಜು ಏಜೆನ್ಸಿಯ ಸತೀಶ್, ತೇಜಸ್ವಿ, ಅರವಿಂದ್, ಚನ್ನರಾಯಪಟ್ಟಣದ ಎಸ್ಟೇಟ್ ಏಜೆಂಟ್ ಮುರುಗನ್, ಬೆಂಗಳೂರಿನ LIC ಏಜೆಂಟ್ ಮಧುಸೂದನ್ ಬಂಧಿತ ಆರೋಪಿಗಳು., ಎಸ್​ಪಿ ಮೊಹ್ಮದ್ ಸುಜಿತಾ ಆರೋಪಿಗಳ ಪತ್ತೆ 6 ವಿಶೇಷ ತಂಡ ರಚನೆ ಮಾಡಿದ್ದರು. ASP ತಮ್ಮಯ್ಯ ಮಾರ್ಗದರ್ಶನ, DYSPಗಳಾದ ಡಿ.ಅಶೋಕ್​​​​, ರವಿಪ್ರಸಾದ್​ ನೇತೃತ್ವದ ವಿಶೇಷ ತನಿಖಾ ತಂಡವು 10 ದಿನದಲ್ಲೇ ಆರೋಪಿಗಳನ್ನು ಅರೆಸ್ಟ್ ಮಾಡಿದೆ.ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್​ ಕಿಡ್ನಾಪ್​ ಯತ್ನ ಕೇಸ್​ನ ಇಬ್ಬರು ಶಾಮೀಲು ಆಗಿದ್ದಾರೆ. ಆರೋಪಿಗಳಿಂದ 3 ಕಾರು, 8 ಮೊಬೈಲ್​​, 2 ಕಬ್ಬಿಣದ ರಾಡ್​, ಕುಡುಗೋಲು ವಶಕ್ಕೆ ಪಡೆಯಲಾಗಿದೆ. ಈ ಕುಖ್ಯಾತ ಗ್ಯಾಂಗ್​​​ ಶ್ರೀಮಂತರನ್ನೇ ಅಪಹರಿಸಿ ಸುಲಿಗೆ ಮಾಡುತ್ತಿದ್ದರಂತೆ … ಎನ್ನಲಾಗಿದೆ.

LEAVE A REPLY

Please enter your comment!
Please enter your name here