ಇತ್ತಿಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಆನ್ಲೈನ್ ಆಟದ ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ

0

ಜಾವಗಲ್: ಪಟ್ಟಣದ ಪೋಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಶೋಭಾ ಅವರು ಸಾರ್ವಜನಿಕ ಸಭೆಯನ್ನು ಬುಧವಾರ ನಡೆಸಿದರು.
‌ಸಭೆಯಲ್ಲಿ ಸಬ್ ಇನ್ಸ್ಪೆಕ್ಟರ್ ಶೋಭಾ ಮಾತನಾಡಿದ ಅವರು ಇತ್ತಿಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಆನ್ಲೈನ್ ಆಟದ ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದು. ಪೋಷಕರು ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.


ಪಟ್ಟಣದ ಪ್ರಮುಖರು ಮಾತನಾಡಿ ಜಾವಗಲ್ ಪಟ್ಟಣದಲ್ಲಿ ಅಂದರ್ ಬಾಹರ್ ದಂಧೆ, ಯುವಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಹೆಚ್ಚಾಗಿ ಮಾಡುತ್ತಿದ್ದಾರೆ, ರಾಷ್ ಡ್ರೈವಿಂಗ್ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಸಭೆಯಲ್ಲಿ ಜೆಡಿಎಸ್ ಅಧ್ಯಕ್ಷ ಸಿದ್ದೇಗೌಡ, ತಿಮ್ಮೇಗೌಡ, ಬಿಜೆಪಿ ಹೋಬಳಿ ಅಧ್ಯಕ್ಷ ಮಸಾಲೆ ರಮೇಶ್, ಕಾಂಗ್ರೆಸ್ ಮುಖಂಡರಾದ ಬೆಳುವಳ್ಳಿ ಮಹದೇವಪ್ಪ, ಮಹಾಲಿಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್, ದೊರೆ, ರೇಷ್ಮಾ ಭಾನು, ಶಾರದಮ್ಮ, ಅಶೋಕ್, ನಾಗಶ್ರೀ, ಪ್ರಭಾಕರ್, ಸ್ಥಳೀಯರಾದ ಗ್ಯಾಸ್ ರವಿ, ಧರ್ಮೆಂದ್ರ, ಚೇತನ್, ರವಿಶಂಕರ್, ಹಾಗೂ ಠಾಣಾ ಸಿಬ್ಬಂದಿ ಇದ್ದರು

LEAVE A REPLY

Please enter your comment!
Please enter your name here