‘ ಜಯಶಾಲಿಗಳು ಮತ್ತು ಪರಾಜಿತರು ‘ ಕುರ್ಅನಿನ ದೃಷ್ಟಿಯಲ್ಲಿ ! ಆ ದಿನದ ಪ್ರವಚನಕಾರರು : ಜ| ಲಾಲ್ ಹುಸೇನ್ ಕಂದಗಲ್
ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆ , ಕುರಾನಿನ ಬೋಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮೊದಲ ದಿನ ಕುರಾನ್ ಸಮಗ್ರ ಪರಿಚಯ, ಕುರಾನ್ ಏನು? ಉತ್ತಮ ಮಾಹಿತಿ ನೀಡುತ್ತದೆ ಎಂಬ ಬಗ್ಗೆ ಲಾಲ್ ಹುಸೇನ್ ಕಂದಗಲ್ ಪ್ರವಚನ , ನಗರದ ಜಮಾಅತೇ ಇಸ್ಲಾಮಿ ಹಿಂದ್ ಸಂಘಟನೆಯ ಆಶ್ರಯದಲ್ಲಿ ಮಾ 1 ಮತ್ತು 2 ತಾರೀಖು
ಎರಡು ದಿನಗಳ ಕಾಲ ಕುರಾನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಜಮಾಅತೇ ಇಸ್ಲಾಮಿ ಹಿಂದ್ನ ಸ್ಥಾನೀಯ ಅಧ್ಯಕ್ಷ ಸದುಲ್ಲ ಖಾನ್ ಹೇಳಿದರು. , ಮೊದಲ ದಿನದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಸೇಂಟ್ ಆಂಟೋನಿ ಚರ್ಚ್ ಧರ್ಮಗುರು ಪ್ಯಾಟ್ರಿಕ್ ಜೋನ್ಸ್ ರಾವ್, ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು , ಎರಡನೇ ದಿನದ ಕಾರ್ಯಕ್ರಮಕ್ಕೆ
ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್, ನಗರಸಭಾ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು , ಸೈಯದ್ ತಾಜ್, ಫಾರೂಖ್ ಪಾಷಾ, ಮೊಹಸಿನ್ ಇಕ್ಬಾಲ್, ಮೌಲಾನಾ ಅಜಾರುಲ್ಲಾ ಖಾನ್ ಇದ್ದರು