ಗುರುವಾರ ನಗರದಲ್ಲಿ ನಡೆದ ಜಲಧಾರೆ ಸಮಾವೇಶದಿಂದಲೂ ಹೊರಗುಳಿ ಯುವ ಮೂಲಕ ಪಕ್ಷ ತೊರೆಯುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಈ ಪ್ರಶ್ನೆ ಹಾಸನದಲ್ಲಿ ಜೆಡಿಎಸ್ ಪಕ್ಷದಿಂದ ನಡೆದ ಜನತಾ ಜಲಧಾರೆ ಕಾರ್ಯಕ್ರಮದಿಂದ ದೂರ ಉಳಿದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರ ಬಗ್ಗೆ ದಟ್ಟವಾಗಿ ಹುಟ್ಟಿಕೊಂಡಿದೆ

ಸತತ 3ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷ ತೊರೆಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹಲವು ತಿಂಗಳಿಂದ ಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ಹರಿದಾಡುತ್ತಿತ್ತು. ಅನೇಕ ಬಾರಿ ಸಿದ್ದರಾಮಯ್ಯ ಅವರ ಜೊತೆ ಕಾಣಿಸಿಕೊಂಡು, ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿ ಹೊಗಳುತ್ತಿದ್ದುದು ಬಹುತೇಕ ಕಾಂಗ್ರೇಸ್ ಸೇರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ

ಇತ್ತೀಚೆಗೆ ಕಳೆದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ನಡೆದ ಸಭೆಗೆ ನಾಯಕರು ಸರಿಯಾದ ಮಾಹಿತಿ ನೀಡಿಲ್ಲ ಎಂದು ದೇವೇಗೌಡರ ಎದುರೇ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು , ಅಂತೆಯೇ ನಿನ್ನೆ ನಡೆದ ಸಮಾವೇಶದಲ್ಲಿ ಹೆಚ್.ಡಿ.ದೇವೇಗೌಡ , ಹೆಚ್.ಡಿ.ಕುಮಾರಸ್ವಾಮಿ ವೇದಿಕೆಯಲ್ಲಿ ಶಿವಲಿಂಗೇಗೌಡರ ಬಗ್ಗೆ ವ್ಯಂಗ್ಯ ವಾಡಿದ್ದು . ಅದಾಗಲೇ ಜೆ.ಡಿ.ಎಸ್. ತೆಕ್ಕೆಯಿಂದ ಅರಸೀಕೆರೆ jds ವಿಕೆಟ್ ಪತನ ಎನ್ನಲಾಗಿದೆ.

ಇತ್ತೀಚೆಗೆ ಹಾಸನ ನಗರಕ್ಕೆ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೀಗೆಂದಿದ್ದರು : ಹಾಸನದಿಂದಲೂ ಬಿಜೆಪಿ – ಜೆಡಿಎಸ್‍ನಿಂದ ಕೆಲವರು ಕಾಂಗ್ರೆಸ್ ಬರುತ್ತಾರೆ ಎಂದಿದ್ದರು. ಶಿವಲಿಂಗೇಗೌಡರು ಸಮಾವೇಶಕ್ಕೆ ಗೈರಾಗಿರುವುದನ್ನು ಗಮನಿಸಿದರೆ ಅವರು ಕೈ ಹಿಡಿಯೋದು ಕರೆ ಆದರೆ ?
ಶಿವಲಿಂಗೇಗೌಡರು ಈ ಎಲ್ಲಾ ಬೆಳವಣಿಗೆ ವೀಕ್ಷಿಸಿ ಉತ್ತತ ಕೊಟ್ಟಿದ್ದು ಹೀಗೆ :

” ರೇವಣ್ಣ ಅವರನ್ನು ಭೇಟಿ ಮಾಡಿ ಎರಡು ತಿಂಗಳ ನಂತರ ಮಾತನಾಡುವೆ, ಸಭೆಗೆ ಬರುವುದಿಲ್ಲ ಎಂದು ಮೊದಲೇ ಹೇಳಿ ಬಂದಿದ್ದೆ. ಅವರು ಏನು ಹೇಳಿದ್ರೋ ಗೊತ್ತಿಲ್ಲ. ಅವರು ಡ್ರಾಮಾ ಆಡಿದ್ದಾರೋ, ನಾನು ಆಡಿದ್ದೀನೋ ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಯಾವ ಡ್ರಾಮಾನೂ ಮಾಡಿಲ್ಲ , ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಿದ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಮಾತು ಆಡಿರಬಹುದು. ಯಾಕೆ ಹೀಗೆ ಮಾತಾಡಿದ್ದೀರಾ, ನಾನು ಏನು ಡ್ರಾಮಾ ಮಾಡಿದ್ದೀನಿ ಎಂದು ಕೇಳುತ್ತೇನೆ. ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲಿ ಇಲ್ಲ. ಅವರು ಹೀಗೆಲ್ಲಾ ಮಾತಾಡಿದ ಮೇಲೆ ಮುಂದೆ ಏನು ಮಾಡಬೇಕು ಎಂಬುದನ್ನು ಕಾರ್ಯಕರ್ತರ ಬಳಿ ಕೇಳುವೆ ” ಎಂದರು.