ಕೊಳವೆ ಬಾವಿ ಕೊರೆಯು  ಮುನ್ನ ರಿಂಗ್ ನಿರ್ವಹಕರು   ಕಡ್ಡಾಯವಾಗಿ  ಸ್ಥಳೀಯ ಪ್ರಾಧಿಕಾರದಿಂದ ನೀಡಿರುವ  ಒಪ್ಪಿಗೆ  ಪತ್ರವನ್ನು ಪರಿಶೀಲಿಸಿಕೊಳ್ಳಬೇಕು

    0

    ಹಾಸನ ಅ.: ಕರ್ನಾಟಕ  ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸದೆ ಜಿಲ್ಲೆಯಲ್ಲಿ ಕೊಳವೆ  ಬಾವಿ  ಕೊರೆಯುತ್ತಿರುವ ರಿಗ್ ಯಂತ್ರಗಳ ಹಾಗೂ ಮಾಲೀಕರ ವಿರುದ್ಧ  ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಅಂತರ್ಜಲ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು  ಕೊಳವೆ ಬಾವಿ ಕೊರೆಯು  ಮುನ್ನ ರಿಂಗ್ ನಿರ್ವಹಕರು   ಕಡ್ಡಾಯವಾಗಿ  ಸ್ಥಳೀಯ ಪ್ರಾಧಿಕಾರದಿಂದ ನೀಡಿರುವ  ಒಪ್ಪಿಗೆ  ಪತ್ರವನ್ನು ಪರಿಶೀಲಿಸಿಕೊಳ್ಳಬೇಕು  ಎಂದು ಸೂಚಿಸಿದರು.

    ಕೊಳವೆ ಬಾವಿ ಕೊರೆದ ನಂತರ ನೀರು ಬರದೆ ಇದಲ್ಲಿ ಮಣ್ಣಿನಿಂದ ಮತ್ತು ಕಲ್ಲಿನಿಂದ  ಸಂಪೂರ್ಣವಾಗಿ ಮುಚ್ಚಿ ಮುಳ್ಳಿನ ಪೋದೆ ಹಾಕಿ   ಸುರಕ್ಷತೆ ಮಾಡುವುದು ರಿಗ್ ಯಂತ್ರದ ಮಾಲೀಕರ ಜವಾಬ್ದಾರಿಯಾಗಿದೆ ಎಂದರು.

    ಸ್ಥಳೀಯ ಅಂತರ್ಜಲ ಪ್ರಾಧಿಕಾರಗಳು  15 ದಿನ ಮುಂಚಿತವಾಗಿ  ಅರ್ಜಿದಾರ ರಿಂದ ಅರ್ಜಿ ಪಡೆದು  ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಂದ 500 ಕೀ ಮೀ ಅಂತರ ಇರುವ ಬಗ್ಗೆ ಕುದ್ದು ಸ್ಥಳ ಪರಿಶೀಲಿಸಿ  ದೃಡೀಕರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
     
    ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಪ್ರಾಧಿಕಾರದ ಮುಖ್ಯಸ್ಥರಾಗಿದ್ದೂ ಬೋರ್ ವೆಲ್  ಕೊರೆದು ಮುಚ್ಚದಿರುವುದು ಕಂಡು ಬಂದಲ್ಲಿ ಪೊಲೀಸ್ ಸಹಾಯದಿಂದ  ಕ್ರಮ ಜರುಗಿಸಬೇಕು ಎಂದರು.
      
    ಪ್ರತಿದಿನ ಕೊಳವೆ ಬಾವಿಯಲ್ಲಿ   ನೀರು ಬರದೆ ಇದ್ದರೂ ಹಾಗೂ   ನೀರು ಬಂದಲ್ಲಿ ಎಷ್ಟು ನೀರು ಬಂದಿದೆ ಎಂದು ನೋಂದಣಿ ಮಾಡಿಕೊಂಡು  ಪ್ರತಿ ತಿಂಗಳು  ಕುಡಿಯುವ  ನೀರು ಮತ್ತು ನೈರ್ಮಲ್ಯ ಇಲಾಖೆಗೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
      
    ಸ್ಥಳೀಯ ಪ್ರಾಧಿಕಾರದಿಂದ  ಮಾಹಿತಿ ನೀಡದಿದ್ದಲಿ  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ  ಮಾಹಿತಿ ನೀಡಲು ಕ್ರಮ ವಹಿಸಬೇಕು  ಎಂದು ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ನಾಗರಾಜು, ಹಿರಿಯ ಭೂ ವಿಜ್ಞಾನಿ ಸುಧಾ, ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ಥಾಪಕರಾದ ಮನು ಕುಮಾರ್ ಹಾಗೂ ರಿಗ್ ಯಂತ್ರಗಳ ಸಂಘದ  ರಂಗಪ್ಪ ಹಾಗೂ ಮತ್ತಿತರರು ಹಾಜರಿದ್ದರು.

    LEAVE A REPLY

    Please enter your comment!
    Please enter your name here