ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಹೈಕಮಾಂಡ್ ತೀರ್ಮಾನ ಅಂತಿಮ .ಚುನಾವಣೆಯ ನಂತರ ಸಂದರ್ಭದಲ್ಲಿ ಶಾಸಕರು ಹಾಗೂ ಮುಖಂಡರು ಯಾರನ್ನು ನಿರ್ಧರಿಸುತ್ತಾರೆ ಅವರೇ ಮುಖ್ಯಮಂತ್ರಿಯೆಂದು ಸಂಸದ ಡಿಕೆ ಸುರೇಶ್ ಸ್ಪಷ್ಟಪಡಿಸಿದರು.
ಹಾಸನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೈಕಲ್ ಜಾಥಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ರಾಷ್ಟ್ರೀಯ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಎಲ್ಲಾ ಪಕ್ಷದಲ್ಲೂ ಮುಖ್ಯಮಂತ್ರಿ ಆಯ್ಕೆ ವಿಚಾರ ಚರ್ಚೆಯಲ್ಲಿ ಇರುತ್ತದೆ .
ಯಾವುದೇ ಜಿಲ್ಲೆಗೆ ಹೋದರೂ ಅಲ್ಲಿ ಅವರು ತಮಗೆ ಬೇಕಾದವರು ಮುಖ್ಯಮಂತ್ರಿ ಆಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಅಂತಿಮವಾಗಿ ಚುನಾವಣೆ ನಂತರ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ರೇವಣ್ಣ ಆರೋಪಕ್ಕೆ ತಿರುಗೇಟು ನೀಡಿದ ಸುರೇಶ್ ಅವರು ಯಾರು ಯಾರು ಬಿಜೆಪಿಯವರ ಮನೆಗೆ ಹೋಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ .ಆದರೆ ರೇವಣ್ಣ ಎಲ್ಲರ ಜೊತೆ ಚೆನ್ನಾಗಿದ್ದಾರೆ. ಕಾಂಗ್ರೆಸ್ ಹೋರಾಟದಿಂದ ಎದ್ದು ಬಂದಂತಹ ಪಕ್ಷ ಇಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುವುದಿಲ್ಲ .
ಅಧಿಕಾರ ಇರಲಿ ಇಲ್ಲದಿರಲಿ ಯಾರಿಗೂ ಶರಣಾಗುವುದಿಲ್ಲ ಎಂದರು. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಿಖಿಲ್ ಸೋಲಿಗೆ ಕಾಂಗ್ರೆಸ್-ಬಿಜೆಪಿ ಕಾರಣ ಎಂಬ ವಿಚಾರವಾಗಿ ಸೃಷ್ಟೀಕರಣ ನೀಡಿದರು. ಅವರು ಈಗ ಚುನಾವಣೆ ಮುಗಿದು ಹೋಗಿದೆ ಫಲಿತಾಂಶವು ಬಂದಿದೆ. ಹಿಂದಿನ ಚುನಾವಣೆ ಬಗ್ಗೆ ಯೋಚನೆಯನ್ನು ಬಿಟ್ಟು ನಮ್ಮದೇನಿದ್ದರೂ ಮುಂಬರುವ ಚುನಾವಣೆ ಬಗ್ಗೆ ಗಮನವಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಏಷ್ಯಾ ಖಂಡದಲ್ಲಿ ಪ್ರಥಮ ಎನ್ನಲಾದ ಕೆಆರ್ಎಸ್ ಅಣೆಕಟ್ಟಿನಲ್ಲಿ ಬಿರುಕು ಬಿಟ್ಟಿರುವ ವಿಚಾರವಾಗಿ ಸಂಸದರ ಆರೋಪ ಏನಿದ್ದರೂ ರಾಜ್ಯ ಸರ್ಕಾರ ತಮ್ಮ ತಾಂತ್ರಿಕ ಪರಿಣಿತರ ಪರೀಕ್ಷೆ ಮಾಡಲು ಬಿಡಬೇಕು .ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ಮಾಡಿದರೆ ಕಾಂಗ್ರೆಸ್ ಸ್ವಾಗತಿಸುತ್ತದೆ. ಸುಮಲತಾ ಹಾಗೂ ಕುಮಾರಸ್ವಾಮಿ ಅವರ ಆರೋಪ ಪ್ರತ್ಯಾರೋಪ ವಿಚಾರವಾಗಿ ಹೇಳಿದವರು ಇಬ್ಬರು ದೊಡ್ಡ ಮುಖಂಡರಿದ್ದಾರೆ .
ಅವರ ಬಗ್ಗೆ ಚರ್ಚೆ ಬೇಡ ನನಗೆ ಕುಮಾರಸ್ವಾಮಿ ಸುಮಲತಾ ಎಲ್ಲರ ಬಗ್ಗೆಯೂ ಸಾಫ್ಟ್ ಕಾರ್ನರ್ ಇದೆ. ಈಗ ಅದರ ಬಗ್ಗೆ ಚರ್ಚೆ ಬೇಡ .ಕೆಆರ್ಎಸ್ ಬಿರುಕು ಬಿಟ್ಟಿರುವ ವಿಷಯ ಆತಂಕ ಉಂಟುಮಾಡಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರವಾದ ಕ್ರಮ ಕೈಗೊಳ್ಳಬೇಕಾಗಿದೆ ಎಂದರು ಇದು ರಾಜ್ಯದ ಆಸ್ತಿಯಾಗಿದ್ದು ಲಕ್ಷಾಂತರ ರೈತರ ಉಸಿರಾಗಿದೆ. ಎರಡು ರಾಜ್ಯದ ರಾಜಕಾರಣ ಕೆ ಆರ್ ಎಸ್ ಮೇಲೆ ನಡೆಯುತ್ತಿದೆ. ಕೆಆರ್ ಎಸ್ ಭದ್ರತೆ ನಮಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದಷ್ಟು ಶೀಘ್ರವಾಗಿ ಅಣೆಕಟ್ಟಿನ ಬೆಳಕಿನ ಸಂಬಂಧಪಟ್ಟಂತೆ ತನಿಖೆ ನಡೆಸಿ ಜನರ ಆತಂಕ ನಿವಾರಿಸಬೇಕೆಂದು ಡಿಕೆ ಸುರೇಶ್ ಕುಮಾರ್ ಒತ್ತಾಯಿಸಿದರು