ಹಾಸನ: ವಿದ್ಯುತ್ ಪ್ರಸರಣ ನಿಗಮದಿಂದ 66 ಕೆವಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ 1/2 ರ ಪ್ರಸರಣ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಮೇ 15 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಗೊರೂರು, ಮಲ್ಲಿಪಟ್ಟಣ, ದೊಡ್ಡಮಗ್ಗೆ ಅರಕಲಗೂಡು, ಶನಿವಾರಸಂತೆ, ಹೆತ್ತೂರು ಮತ್ತು ಯಸಳೂರು ಕೇಂದ್ರಗಳಲ್ಲಿ ಹಾಗೂ ಎನ್.ಟಿ.ಸಿ, ಶ್ರೀಕಾಟ್, ಹೇಮಾವತಿ ಮತ್ತು ಹಿಮ್ಮತ್ ಸಿಂಕಾ ಸ್ಥಾವರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕವಿಪ್ರನಿನಿ ಟಿ.ಎಲ್. ಮತ್ತು ಎಸ್.ಎಸ್. ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿರುತ್ತಾರೆ .