ಗಮನಿಸಿ 🕯 : ಬೇಲೂರಿನ ಅರೇಹಳ್ಳಿ ಸಕಲೇಶಪುರದ ಹಾನುಬಾಳು ಸುತ್ತಮುತ್ತ ನಾಳೆ ಮಾ.10 ರಿಂದ 18 ದಿನ ಹಗಲೊತ್ತು ವಿದ್ಯುತ್ 💡 ಕಡಿತ ಗೊಳ್ಳಲಿದೆ

0

ವಿದ್ಯುತ್ ವ್ಯತ್ಯಯ
ಹಾಸನ ಮಾ. (ಹಾಸನ್_ನ್ಯೂಸ್ !, ಬೇಲೂರು ತಾಲೂಕಿನಲ್ಲಿರುವ ವಿದ್ಯುತ್ ಮಾರ್ಗಗಳ ಗೋಪುರಗಳ  ಮೇಲೆ ಹಾಲಿ ಇರುವ 66 ಕೆ.ವಿ ಸಕಲೇಶಪುರ – ಅರೆಹಳ್ಳಿ ವಿದ್ಯುತ್ ಮಾರ್ಗದ ಎರಡನೇ ಸಕ್ರ್ಯೂಟ್ ವಿದ್ಯುತ್ ಮಾರ್ಗ ರಚನೆ ಕಾಮಗಾರಿಗೆ 66 ಕೆ.ವಿ ಅರೆಹಳ್ಳಿ   ಮಾರ್ಗದ ಲೈನ್ ಕ್ಲಿಯರ್ ತೆಗೆದುಕೊಳ್ಳುವುದರಿಂದ  66/11ಕೆ.ವಿ ಅರೇಹಳ್ಳಿ ಹಾಗೂ 66/11 ಕೆ.ವಿ  ಹಾನುಬಾಳು ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 11 ಕೆ.ವಿ ಪೂರಕಗಳ ಗ್ರಾಹಕರಿಗೆ  ಮತ್ತು ಸಾರ್ವಜನಿಕರಿಗೆ ಮಾ. 10, 13 , 17 ,18 ,20 ,24 ,25, 27,31, ಹಾಗೂ ಏಪ್ರಿಲ್ 1,3, 7,8 ,10, 15, 17, 21 ಮತ್ತು 22ರವರೆಗೆ ಒಟ್ಟು  ಹದಿನೆಂಟು ದಿನಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗುವುದು ಸಾರ್ವಜನಿಕರು ಸಹಕರಿಸುವಂತೆ  ಬೃಹತ್ ಕಾಮಗಾರಿ ವಿಭಾಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ  ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here