ಹಾಸನ / ಕೊಣನೂರು : ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯಸ್ವಾಮಿ ಸಾರ್ವಜನಿಕ ರಥೋತ್ಸವವನ್ನು ರದ್ದು ಗೊಳಿಸಿ ಆದೇಶಿಸಿ ತಹಶೀಲ್ದಾರ್ ರೇಣುಕುಮಾರ್ YM ಸೂಚನೆ!
ರಾಮನಾಥಪುರದ ದೇವಾಲಯದಲ್ಲಿ ಕಳೆದ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ್ , ಇತ್ತೀಚೆಗೆ ಪುನಃ ಕೋವಿಡ್ 19 ಸೋಂಕು ಹರಡುತ್ತಿದ್ದು ಮತ್ತು ನೀತಿ ಸಂಹಿತೆ ಜಾರಿಯಲ್ಲಿದೆ ಹಾಸನ ಜಿಲ್ಲಾಧಿಕಾರಿ ಸೂಚನೆಯಂತೆ ನಾಡಿದ್ದು ಡಿ. 9ರಂದು ನಡೆಯ ಬೇಕಿದ್ದ ದಿವ್ಯ ರಥೋತ್ಸವವನ್ನು ದೇವಸ್ಥಾನದ ಆವರಣದೊಳಗೆ ಸರಳವಾಗಿ ನಡೆಸಬೇಕು ಎಂದು ಸಲಹೆ ನೀಡಿರುತ್ತಾರೆ .
ಈ ಸಂದರ್ಭದಲ್ಲಿ : ಪಾರುಪತ್ತೇದಾರ್ ರಮೇಶ್ ಭಟ್, ಡಾ.ಸ್ವಾಮಿಗೌಡ, ಮುಜರಾಯಿ ವಿಷಯ ನಿರ್ವಾಹಕಿ ಅನಿತಾ, ಕಂದಾಯ ನಿರೀಕ್ಷಕ ಸಿ.ಸ್ವಾಮಿ ಉಪತಹಶೀಲ್ದಾರ್, ರವಿ, ಪಿಡಿಒ ವಿಜಯಕುಮಾರ್ ಮತ್ತು ಎಎಸ್‌ಐ ಪ್ರಹ್ಲಾದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.