ಕೋಡಿ ಬಿದ್ದ ಕೆರೆ– ಬೈಕಿನಲ್ಲಿ ಹೋಗುವಾಗ ನೀರಿನಲ್ಲಿ ಮುಳುಗಿ ಬಾಲಕಿ ಸಾವು

0

ಚನ್ನರಾಯಪಟ್ಟಣ (ಹಾಸನ ಜಿ.):  ಬಾಗೂರು ಹೋಬಳಿಯ ದಡ್ಡಿಹಳ್ಳಿ ಕೆರೆ ಕೋಡಿ ಬಿದ್ದಿದ್ದು, ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿ

ಮೃತಪಟ್ಟಿದ್ದಾಳೆ. 
ಗ್ರಾಮದ 5 ನೇ ತರಗತಿಯ ವಿದ್ಯಾರ್ಥಿನಿ ರಂಜಿತಾ ಮೃತಪಟ್ಟ ಬಾಲಕಿ.  ಗುರುವಾರ ಬೆಳಿಗ್ಗೆ ಹೊಲದಿಂದ ತನ್ನ ಸಂಬಂಧಿಯ ಜೊತೆಗೆ ಈ ಬಾಲಕಿ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದಳು.  ಈ ವೇಳೆ ಕೆರೆಯ ಕೋಡಿ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ

ಬೈಕ್ ಕೊಚ್ಚಿಕೊಂಡು ಹೋಗಿದೆ. ಇದನ್ನು ನೋಡಿದ ವೃದ್ಧೆಯೊಬ್ಬರು, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಬೈಕ್ ಓಡಿಸುತ್ತಿದ್ದ ಯುವಕನನ್ನು ರಕ್ಷಿಸಿದ್ದಾರೆ. ಆದರೆ, ಬಾಲಕಿ ರಂಜಿತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

LEAVE A REPLY

Please enter your comment!
Please enter your name here