ಪತ್ನಿ ಸೇರಿ ಆಕೆಯ ಪೋಷಕರಿಂದ ಕಿರುಕುಳ ಆರೋಪ : ಮನನೊಂದು ಸಾವಿಗೆ ಶರಣಾದ ಮತ್ತೋರ್ವ ವಿವಾಹಿತ

0

ಹಾಸನ : ಇನ್ನು ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ ಅಷ್ಟರಲ್ಲಿಯೇ ಕಿರಣ್ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಬಗ್ಗೆ ಕಿರಣ್ ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಜೈಲುಪಾಲಾಗಿದ್ದ ಕಿರಣ್,ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಎಲ್ಲಾ ಘಟನೆಯಿಂದ ಮನನೊಂದು ಜುಲೈ 31ರ ರಾತ್ರಿ ಮರಕ್ಕೆ

ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ , ಕಿರಣ್ B.B. (ಕೇವಲ 26 ವರ್ಷದ ಯುವಕ ) ಮೃತ ದುರ್ದೈವಿಯಾಗಿರುತ್ತಾನೆ. ಈತ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದವನಾದ ಕಿರಣ್, ಬೇಕರಿ ನಡೆಸುತ್ತಿದ್ದನು. ಕಳೆದ ಫೆ.19 ರಂದು ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಪತ್ನಿ ಸ್ಪಂದನಾ ಸೇರಿ

ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ ,ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ನವವಿವಾಹಿತಸಾವಿಗೆ ಶರಣಾದ ದುರ್ಘಟನೆ ಘಟನೆ ಘಟಿಸಿಹೋಗಿದೆ . , ಆತ್ಮಹತ್ಯೆಗೆ ಶರಣಾದ ನವವಿವಾಹಿತ. ಕಳೆದ ಫೆಬ್ರವರಿ 19 ರಂದು ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬರನ್ನು ಪ್ರೀತಿಸಿ #LoveMarriage

ಮದುವೆಯಾಗಿದ್ದರು. ಕಿರಣ್ ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಉದಯಪುರ (Udayapur) ಗ್ರಾಮದವರು. ಉದಯಪುರದಲ್ಲಿಯೇ ಬೇಕರಿ ನಡೆಸಿಕೊಂಡ ಅದೇಗೋ ಜೀವನದ ನೆಲೆ ಕಂಡುಕೊಂಡಿದ್ರು . , ಮದುವೆ ನಂತರ ಪತ್ನಿ ಸ್ಪಂದನಾ ಕಿರಣ್‌ಗೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಸ್ಪಂದನಾ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದರು. ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದರು ಎಂದು ಕಿರಣ್ ಪೋಷಕರು ಆರೋಪಿಸುತ್ತಾರೆ ‌, ಇದೀಗ ಇದು

ತನಿಖಾ ಹಂತದಲ್ಲಿದೆ ., ಕಿರಣ್ ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಗ್ರಾಮಕ್ಕೆ ಹಿಂದಿರುಗಿದ್ದರು. ಜೈಲಿನಿಂದ ಹೊರ ಬಂದ ಬಳಿಕ ಕಿರಣ್ ಮಾನಸಿಕ ಖಿನ್ನತೆಗೆ ಜಾರಿದ್ದರು. ಜುಲೈ 31ರ ರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿಬಿಟ್ಟಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here