ಎಣ್ಣೆ ಕುಡಿದ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯ

0

ಹಾಸನ : ಪುನೀತ್ ತಂದೆ ರಂಗಸ್ವಾಮಿ ಅವರು ಪ್ರಕಾಶ್ ಅವರಿಗೆ ಫೋನ್‌ಮಾಡಿ ನನ್ನ ಮಗ ಪುನೀತ್ ನಿನ್ನ ಜೊತೆ ಎಣ್ಣೆ ಕುಡಿದ್ನಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರಕಾಶ್ ಇಲ್ಲ ಎಂದಿದ್ದಾರೆ.ಸುಳ್ಳು ಹೇಳಬೇಡ, ನೀನು ಹೇಳಿದೆ ಎಂದು ಪುನೀತನಿಗೆ ಹೇಳುವುದಿಲ್ಲಾ ಹೇಳು ಎಂದು ಒತ್ತಾಯ ಮಾಡಿದಾಗ, ಪ್ರಕಾಶ ಹೌದು ನಾನು, ಪುನೀತ, ಯಶ್ವಂತ ಮೂರೂ ಜನ ಎಣ್ಣೆ ಕುಡಿದಿದ್ದಾಗಿ ಹೇಳಿದ್ದಾರೆ.ಇದೇ ಕಾರಣಕ್ಕೆ

ಸಂಜೆ 7 ಗಂಟೆಯಲ್ಲಿ ಪುನೀತ ಮತ್ತು ಯಶ್ವಂತ ಇಬ್ಬರೂ ಪ್ರಕಾಶ್ ಮನೆಯ ಹತ್ತಿರ ಬಂದು ಮನೆಯ ಜಗುಲಿಯ ಮೇಲೆ ಕುಳಿತಿದ್ದ ಪ್ರಕಾಶ್‌ಗೆ ನಾವು ಕುಡಿದಿರುವ ವಿಚಾರವನ್ನು ನೀನೇ ಹೇಳಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿಒ ನೀನು ಬದುಕಿದ್ದರೆ ತಾನೆ ಹೇಳೋದು ನಿನ್ನನ್ನು ಸಾಯಿಸುತ್ತೇನೆ ಎಂದು ಏಕಾಏಕಿ ಪುನೀತ ಮತ್ತು ಯಶ್ವಂತ ಇಬ್ಬರೂ ಪ್ರಕಾಶನಿಗೆ ಕೈಯಿಂದ ಬಾಯಿಗೆ ಮತ್ತು ಮುಖಕ್ಕೆ ಗುದ್ದಿ ತಲೆ ಹಿಡಿದು ಗೋಡೆಗೆ ಹಿಂಭಾಗದ ತಲೆಯನ್ನು ಬಲವಾಗಿ ತಾಡಿಸಿದ್ದಾರೆ.ಪ್ರಕಾಶ ಕೂಗಿಕೊಂಡಾಗ ಮನೆಯಲ್ಲಿದ್ದ ಪ್ರಕಾಶನ ತಾಯಿ ಹುಚ್ಚಮ್ಮ

ಮತ್ತು ಅಲ್ಲೇ ಪಕ್ಕದ ಸೈಟಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಕೇಶವೇಗೌಡ ಮತ್ತು ಅತ್ತಿಗೆ ಸುಭದ್ರಾದೇವಿ ಓಡಿ ಬಂದಿದ್ದಾರೆ. ಇದನ್ನು ಕಂಡ ಪುನೀತ ಮತ್ತು ಯಶ್ವಂತ ಇಬ್ಬರೂ ಓಡಿ ಹೋಗಿದ್ದಾರೆ.ನಂತರ ಬಾಯಲ್ಲಿ ರಕ್ತ ಬರುತ್ತಿದ್ದುದರಿಂದ ಆಟೋದಲ್ಲಿ ಹಾಸನದ ಸಂಜೀವಿನಿ ನಂತರ ಮಂಗಳಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪ್ರಥಮ ಚಿಕಿತ್ಸೆ ಮಾಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಲ್ಲಿಂದ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ

ಬೆಂಗಳೂರಿಗೆ ಹೋಗಲಾಗದೆ ಜೀವಜ್ಯೋತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಪ್ರಕಾಶ್ ಮೃತಪಟ್ಟಿದ್ದಾರೆ. ಇದಕ್ಕೆ ಕಾರಣರಾದ ಪುನೀತ ಮತ್ತು ಯಶ್ವಂತ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು ಆಧರಿಸಿ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. , ಹಾಸನ ತಾಲೂಕಿನ ಚಿಕ್ಕಗೇಣಿಗೆರೆ ಗ್ರಾಮದಲ್ಲಿ ನಡೆದಿದೆ. ಪ್ರಕಾಶ್(38) ಕೊಲೆಯಾದವ್ಯಕ್ತಿ. ಕೊಲೆಯಾಗಿರೋ ಪ್ರಕಾಶ್, ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ.

ಅದೇ ಗ್ರಾಮದ ಹರೀಶ ಎಂಬುವವರು ಹೊಸದಾಗಿ ಕಟ್ಟುತ್ತಿರುವ ಮನೆಗೆ ಮೋಲ್ಡ್ ಹಾಕಿಸಿದ್ದರಿಂದ ಪ್ರಕಾಶ್ ಅವರನ್ನು ಊಟಕ್ಕೆ ಕರೆದಿದ್ದರು. ಪ್ರಕಾಶ ಅವರ ಪತ್ನಿ ಪುಟ್ಟಲಕ್ಷ್ಮಿ ಅವರು ಜಾಕಿ ಗಾಮೆಂಟ್ಸ್‌ನಲ್ಲಿ ಹೆಲ್ಪರ್ ಕೆಲಸಕ್ಕೆ ಹೋಗಿ ಸಂಜೆ 7 ಗಂಟೆಗೆ ಮನೆಗೆ ಬಂದರು. ಆಗ ಪ್ರಕಾಶ್ ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದರು.ಹಲ್ಲು ನೋವಾಗಿದೆ ಉಪ್ಪು ಕೊಡು ಎಂದು ಕೇಳಿದ್ದಾರೆ. ಕೊಡಲು ಹೋದಾಗ ಪ್ರಕಾಶ್ ಅವರ ತುಟಿ ಊದಿ ರಕ್ತ ಬರುತ್ತಿತ್ತು. ಮಧ್ಯಾಹ್ನ ಹರೀಶ ಅವರ ಮನೆಗೆ ಊಟಕ್ಕೆ ಹೋಗಿ ಬಂದು

ಮನೆಯಲ್ಲಿದ್ದಾಗ ಗ್ರಾಮದ ಪುನೀತ ಮತ್ತು ಆತನ ಸ್ನೇಹಿತ ಯಶ್ವಂತ ಜೊತೆ ಮದ್ಯಪಾನ ಮಾಡಿ ಬಂದು ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here