ಸಕಲೇಶಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಾಧ್ಯಮ ದಿನಾಚರಣೆ 2023.

0

ಮುಂದಿನ ಪತ್ರಿಕಾ ದಿನಾಚರಣೆಯನ್ನು ಸ್ವಂತ ಕಟ್ಟಡದಲ್ಲಿ ಮಾಡುವಂತಹಾಗಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್.

ಪತ್ರಿಕೆಗಳಿಲ್ಲದ ಸಮಾಜವನ್ನು ಊಹಿಸುವುದು ಅಸಾದ್ಯ , ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ ಎಂದು ಶಾಸಕ ಸಿಮೆಂಟ್ ಮಂಜು .

ಸಕಲೇಶಪುರ.
ನಗರದ ಲಯನ್ಸ್ ಹಾಲ್‌ನಲ್ಲಿ ಸಕಲೇಶಪುರ ತಾಲ್ಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ದಿನಾಚರಣೆ ಉದ್ಘಾಟಿಸಿದ ಶಾಸಕ ಸಿಮೆಂಟ್ ಮಂಜು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿ ಮಾತನಾಡಿದ ಅರುಣ್ ರಕ್ಷಿದಿಯವರು ಸರ್ಕಾರದಿಂದ ಬರುವ ಅನುದಾನದಲ್ಲಿ ಹೆಚ್ಚಿನ ಅನುದಾನ ಬರುವಂತೆ ಮಾನ್ಯ ನೂತನ ಶಾಸಕರು ಗಮನಹರಿಸಬೇಕು ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸುವ ಕನಸನ್ನು ಈ ಶಾಸಕರಿಂದ ಆಗಲಿ ಈ ನಿಟ್ಟಿನಲ್ಲಿ ಎಲ್ಲಾ ಪತ್ರಿಕೆ ವರದಿಗಾರರು ಶ್ರಮವಹಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ, ಇದುವರೆಗೆ ಆಳಿದ ಎಲ್ಲ ಸರ್ಕಾರಗಳು ಪತ್ರಕರ್ತರನ್ನು ನಿರ್ಲಕ್ಷಿಸಿದ್ದು ನಾವು ಇದುವರಗೆ ಸರ್ಕಾರದ ಮುಂದಿಟ್ಟಿರುವ ಯಾವುದೆ ಬೇಡಿಕೆಗಳು ಈಡೇರದಾಗಿದೆ,ಇತ್ತಿಚ್ಚಿನ ವರ್ಷಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳು ಪತ್ರಕರ್ತರ ಬಗ್ಗೆ ಅಸಡ್ಡೆ ತೊರುತ್ತಿದ್ದು ಇದು ಉತ್ತಮ ಬೆಳವಣಿಗೆಯಲ್ಲ ಪತ್ರಕರ್ತರ ಯಾವುದೆ ಕೆಲಸಗಳು ಸರ್ಕಾರಿ ಕಚೇರಿಗಳಲ್ಲಿ ಸುಸೂತ್ರವಾಗಿ ನೆರವೇರದಾಗಿದೆ. ಸಮಾಜದ ಸಂಪರ್ಕವಾಹಿನಿಯಾಗಿ ನಿತ್ಯ ಹತ್ತಾರು ಸಮಸ್ಯೆಗಳ ನಡುವೆ ಯಾವುದೆ ಪ್ರತಿಫಲಪೇಕ್ಷೆ ಇಲ್ಲದೆ ಕೆಲಸ ಮಾಡುವ ಪತ್ರಕರ್ತರಿಗೆ ಸಮಾಜದ ಎಲ್ಲ ಅಂಗಗಳು ಸ್ಪಂದಿಸ ಬೇಕು ಎಂದರು.

ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಕೆಂಚೆಗೌಡ ಮಾತನಾಡಿ, ಪತ್ರಿಕೆಗಳು ಹಾಗೂ ಮಾಧ್ಯಮಗಳು ಇಂದು ಉದ್ಯಮಿಗಳ ಹಿಡಿತದಲ್ಲಿದ್ದು ಪತ್ರಕರ್ತರ ಸ್ಥಿತಿ ಶೋಚನಿಯವಾಗಿದೆ. ಬದಲಿ ಉದ್ಯೋಗವಿಲ್ಲದೆ ಪತ್ರಕರ್ತರಾಗಿ ಜೀವನ ನಡೆಸುವುದು ದುಸ್ಥರ. ಯಾವುದೆ ಹಂತದಲ್ಲೂ ಪತ್ರಕರ್ತರು ತಮ್ಮ ಸ್ವಾಭಿಮಾನ ಕಳೆದುಕೊಳ್ಳಬಾರದು ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುವ ಪತ್ರಕರ್ತ ಭಯೋತ್ಪದಕರಿಗೆ ಸಮ ಎಂದರು.

ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಓದುಗರ ಮೌಲ್ಯವನ್ನು ಉಳಿಸಿಕೊಳ್ಳುವಲ್ಲಿ ಎಡವುತ್ತಿದ್ದವೆ.ಮುಂದಿನ ದಿನಗಳಲ್ಲಿ ಒಳ್ಳೆಯ ಮೌಲ್ಯವನ್ನು ಉಳಿಸಿಕೊಳ್ಳುವ ಕೆಲಸವನ್ನು ಪತ್ರಿಕೆ ವರದಿಗಾರರು ಜೊತೆಗೆ ಹಾಸನದಲ್ಲಿ ಮಾಜಿ ಶಾಸಕರಾದ ಪ್ರೀತಮ್ ಗೌಡ ರವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಕೆಲಸವನ್ನು ಸಕಲೇಶಪುರದ ನೂತನ ಶಾಸಕರು ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಸಿಮೆಂಟ್ ಮಂಜು ಮಾತನಾಡಿ ತಾಲೂಕು ಕಾರ್ಯ ನಿರಂತರ ಪತ್ರಕರ್ತ ಸಂಘದ ಭವನಕ್ಕೆ ನಿರ್ಮಾಣಕ್ಕೆ ಅನುದಾನ ತರುವಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ .
ಸಕಲೇಶಪುರದ ಅಭಿರುದ್ದಿ ಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಮಾಧ್ಯಮ ಸರ್ಕಾರದ 4ನೇ ಅಂಗ, ಸರ್ಕಾರವನ್ನು ತಿದ್ದುವ ಎಂದರು ಶಕ್ತಿ ಮಾಧ್ಯಮಕ್ಕೆ ಎಂದರು .

ಹಿರಿಯ ಪತ್ರಕರ್ತ ನಾಗರಾಜ್ ಹೆತ್ತೂರು,ಪತ್ರಿಕಾ ವಿತರಕರಾದ ಬಾಳ್ಳುಪೇಟೆಯ ವಸಂತ್ ಕುಮಾರ್, ಶೇಕ್ ಆಹಮ್ಮದ್ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್ ಎಂ ಮಂಜುನಾಥ್, ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವೇಣು ಕುಮಾರ್, ಲಯನ್ಸ್ ಅಧ್ಯಕ್ಷೆ ಬಬಿತ ವಿಶ್ವನಾಥ, ರೋಟರಿ ಸಂಸ್ಥೆಯ ಅಧ್ಯಕ್ಷ ಸದಾಶಿವ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವ, ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ, ಸಾಮಾಜಿಕ ಹೋರಾಟಗಾರ ಯೆಡೇಹಳ್ಳಿ ಆರ್ ಮಂಜುನಾಥ್ , ಹಿಂದೂ ಮುಖಂಡ ರಘು ಸಕಲೇಶಪುರ, ಬಿಜೆಪಿ ಹಿರಿಯ ಮುಖಂಡ ಹೊಡಚ್ಚಹಳ್ಳಿ ರಾಮಚಂದ್ರೇಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಂಜುನಾಥ ಸಂಘ್ವಿ, ಕಸಾಪ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಚಿಂತಕಿ ಮೀನಾಕ್ಷಿ ಖಾದರ್ , ರಂಗಕರ್ಮಿ ಪ್ರಸಾದ್ ರಕ್ಷಿದಿ, ಜೇನು ಪೋಷಕರ ಸಹಕಾರ ಸಂಘದ ಅಧ್ಯಕ್ಷ ಜೈಮಾರುತಿ ದೇವರಾಜ್, ಸಮಾಜ ಸೇವಕ ಎಸ್ ಎಸ್ ಅಸ್ಲಾಂ, ಸಮಾಜ ಸೇವಕಿಯರಾದ ಚನ್ನವೇಣಿ ಎಂ ಶೆಟ್ಟಿ, ಕೌಶಲ್ಯ ಲಕ್ಷಣ್ಣಗೌಡ, ನಿರ್ಮಲ ಪವಿತ್ರನ್, ಸುಂದ್ರಮ್ಮ, ಕಾಂಗ್ರೆಸ್ ತಾಲ್ಲೂಕು ಮಹಿಳಾ ಅಧ್ಯಕ್ಷೆ ಅನ್ನಪೂರ್ಣ, ಮಲೆನಾಡು ರಕ್ಷಣಾ ಸೇನೆ ರಾಜ್ಯ ಅಧ್ಯಕ್ಷ ಸಾಗರ್, ಕರಾವೇ ರಮೇಶ್ ಪೂಜಾರಿ, ವೀರಶೈವ ಯುವ ವೇದಿಕೆಯ ಸಂದೇಶ್ ಹೆಬ್ಬನಹಳ್ಳಿ, ಸವಿತಾ ಸಮಾಜದ ಅಧ್ಯಕ್ಷ ಸೋಮಶೇಖರ್, ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ್ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here